ಯಾವುದಾದ್ರೂ ವಸ್ತು ಬಿಟ್ಟಿ ಅಥವಾ ಧರ್ಮಕ್ಕೆ ಸಿಕ್ರೆ ನನ್ಗೂ ಇರ್ಲಿ, ನನ್ ಮನೆಯವರಿಗೂ ಇರ್ಲಿ ಅಂತ ಜನ ನಾ ಮುಂದು ತಾ ಮುಂದು ಎನ್ನುತ್ತಾರೆ. ಇದಕ್ಕೆ ಸೂಕ್ತ ನಿದರ್ಶನದಂತಿರುವ ಘಟನೆಯೊಂದು ಇದೀಗ ನಡೆದಿದ್ದು, ವಾಹನದಿಂದ ಬಿದ್ದ ಕೋಳಿಗಳನ್ನು ಜನ ಮುಗಿಬಿದ್ದು ಕೊಂಡೊಯ್ದಿದ್ದಾರೆ.
ಕೋಳಿ ಸಾಗಾಟದ ಪಿಕಪ್ ಟ್ರಕ್ ಪಲ್ಟಿಯಾಗಿದ್ದು, ಆ ಸಂದರ್ಭದಲ್ಲಿ ವಾಹನದಿಂದ ಬಿದ್ದ ಕೋಳಿಗಳನ್ನು ಕೊಂಡೊಯ್ಯುಲು ಚಿಕನ್ ಪ್ರಿಯರು ಮುಗಿ ಬಿದ್ದಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ಉತ್ತರ ಪ್ರದೇಶದ ಕನ್ನೌಜ್ ಎಂಬಲ್ಲಿ ನಡೆದಿದ್ದು, ಚಾಲಕ ನಿದ್ದೆಗೆ ಜಾರಿದ ಕಾರಣ ಕನೌಜ್ ಎಕ್ಸ್ಪ್ರೆಸ್ವೇಯಲ್ಲಿ ಕೋಳಿ ಸಾಗಾಟದ ವಾಹನ ಪಲ್ಟಿ ಹೊಡೆದಿದೆ. ಈ ಅಪಘಾತದಿಂದಾಗಿ ವಾಹನದಿಂದ ಕೋಳಿಗಳು ಬಿದಿದ್ದು, ಬಿದ್ದ ಕೋಳಿಗಳನ್ನು ಲೂಟಿ ಹೊಡೆಯಲು ಸ್ಥಳಿಯರು ನಾ ಮುಂದು ತಾ ಮುಂದು ಎನ್ನುತ್ತಾ ಮುಗಿಬಿದ್ದಿದ್ದಾರೆ. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಟ್ರಕ್ ಚಾಲಕ ಸೇರಿದಂತೆ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರದೊಯ್ದಿದ್ದಾರೆ.