ತುಮಕೂರು: ಗ್ರಾಮ ಪಮಚಾಯಿತಿಗೆ ಗ್ರಾಮ ನೈರ್ಮಲ್ಯಕ್ಕೆ ಸರ್ಕಾರ ಲಕ್ಷಾಂತರ ರೂ ಅನುದಾನ ಬಿಡುಗಡೆಗೊಳ್ಳುತ್ತಿದ್ದರೂ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ 4- 5 ವರ್ಷಗಳಾದರೂ ಚರಂಡಿ ಸ್ವಚ್ಛಗೊಳಿಸದೆ ಕೊಳತು ನಾರುತಿದ್ದು, 2-3 ಮಕ್ಕಳಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇತರರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಜನ ಬದುಕುವಂತ ಪರಿಸ್ಥಿತಿ ಕೊರಟಗೆರೆ ತಾಲೂಕಿನ ವಜ್ಜನಕುರಿಕೆ ಗ್ರಾಮ ಪುಚಾಯತಿ ವ್ಯಾಪ್ತಿಯ ಗ್ರಾಮ ಒಂದರಲ್ಲಿ ನಿರ್ಮಾಣವಾಗಿದೆ.
ಕೊರಟಗೆರೆ ತಾಲೂಕು ವಜ್ಜನಕುರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಡರ ಅಗ್ರಹಾರ ಗ್ರಾಮದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಚರಂಡಿ ಶುದ್ದೀಕರಿಸದೆ ಆನೈರ್ಮಲ್ಯ ತಾಂಡವಾಡುತ್ತಿದ್ದು, ಇದರಿಂದ ಬಹಳಷ್ಟು ಜನರಿಗೆ ಡೆಂಗ್ಯೂ ಜ್ವರದ ಜೊತೆಗೆ ಸಾಂಕ್ರಾಮಿಕ ರೋಗ ಹರಡುವ ಬೀದಿಯಲ್ಲಿ. ಜನರು ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೇಡರ ಅಗ್ರಹಾರ ಗ್ರಾಮದಲ್ಲಿ ಹಿಂದುಳಿದ ಪ್ರದೇಶವಾಗಿ ಅಲ್ಲಿನ ಬಹುತೇಕ ಜನತೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ನಿರ್ಗತಿಕರಂತೆ ಅಭಿವೃದ್ಧಿ ವಂಚಿತರಾಗಿ ಕಾಲ ಕಳೆಯುತ್ತಿದ್ದಾರೆ, ಈ ಗ್ರಾಮದಲ್ಲಿ ಸರ್ಕಾರದಿಂದ ಆಷ್ಟಾಗಿ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದ್ದು,
ಇಲ್ಲಿನ ಗ್ರಾಮ ಪಂಚಾಯಿತಿ ಕಳೆದ ನಾಲ್ಕು ವರ್ಷಗಳಿಂದ ಗ್ರಾಮದ ಕಡೆ ತಲೆ ಹಾಕದೆ ಗ್ರಾಮದಲ್ಲಿ ಅನೈರ್ಮಲ್ಯ ತಾಂಡವಾಡುತ್ತಿದ್ದು, ಮಡುಗಟ್ಟಿದ ಚರಂಡಿಯಲ್ಲಿನ ತ್ಯಾಜ್ಯ ದುರ್ನಾಥ ಬೀರುತ್ತಿದ್ದು ಸೊಳ್ಳೆಗಳ ವಾಸಸ್ಥಾನಗಳಾಗಿ ಅಲ್ಲಿನ ನಾಗರೀಕರಿಗೆ ಡೆಂಗ್ಯೂ ಜ್ವರದ ಜೊತೆಗೆ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಕೆಲವು ಚಿಕ್ಕ ಮಕ್ಕಳು ಡೆಂಗ್ಯೂ ಜ್ವರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಡೆಂಗ್ಯೂ ಜ್ವರ ಕಂಡ ನಂತರ ನಾಮಕಾವಸ್ಥೆ ಗೆ ಅರ್ಧಂಬರ್ಧ ಸ್ವಚ್ಛತೆ ಮಾಡಿ ಅದರ ಹೆಸರಿನಲ್ಲಿ ಹಣ ಕಬಳಿಸಲು ಹುನ್ನಾರ ನಡೆಯುತ್ತಿದೆ.
ಗ್ರಾಮ ಪಂಚಾಯಿತಿ ಈ ಗ್ರಾಮಗಳ ಕಡೆ ನಾಲ್ಕು ವರ್ಷಗಳಿಂದ ತಲೆಯಾಕದೇ ಗ್ರಾಮ ನೈರ್ಮಲ್ಯಕ್ಕೆ ಎಳ್ಳು ನೀರು ಬಿಟ್ಟಿದೆ ಎಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಂಚಾಯತಿಗಳಲ್ಲಿ ಗ್ರಾಮ ನೈರ್ಮಲ್ಯ ಹಳ್ಳ ಹಿಡಿದಿದೆ, ಮಳೆಗಾಲದಲ್ಲಿ ಅತಿ ಹೆಚ್ಚು ಮಳೆಯಾಗಿ ಹಳ್ಳ ಕೊಳ್ಳ ಸೇರಿದಂತೆ ಬಹಳಷ್ಟು ಗುಂಡಿಗಳಲ್ಲಿ ನೀರು ತುಂಬಿಕೊಂಡು ಸೊಳ್ಳೆ ಕಾಟ ಹೆಚ್ಚಾಗಿ ಜೊತೆಗೆ ಚರಂಡಿಗಳಲ್ಲಿ ಚರಂಡಿ ಸ್ವಚ್ಛಗೊಳಿಸದೆ ಸೊಳ್ಳೆ ಹೆಚ್ಚಳಕ್ಕೆ ಕಾರಣವಾಗಿ , ಡೆಂಗ್ಯೂ ಜೊತೆಗೆ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಜನ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ಬೇಸರದ ಸಂಗತಿ, ಸಾರ್ವಜನಿಕರು ಗ್ರಾಮ ಪಂಚಾಯತಿ ವಿರುದ್ಧ ಹಿಡೀ ಶಾಪ ಹಾಕುತ್ತಿದ್ದಾರೆ.ಗ್ರಾಮಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕಾದ ಗ್ರಾಮ ಪಂಚಾಯತ್ ಪಿ.ಡಿ.ಒ ಆಡಳಿತ ವ್ಯವಸ್ಥೆಯು ಕಂಡು ಕಾಣದಂತೆ ಜಾಣ ಕುರುಡತನ ಮೆರೆಯುತ್ತಿರುವುದಕ್ಕೆ ಹಿಡಿದ ಕೈ
ಕನ್ನಡಿಯಾಗಿದೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಮಹಾತ್ಮ ಗಾಂಧಿ ಕಂಡ ಗ್ರಾಮಸ್ವರಾಜ್ ಕನಸು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರ ನೀಡುವ ಲಕ್ಷಾಂತರ ರೂ ನಿರುಪಯುಕ್ತವಾಗುತ್ತಿದ್ದು, ಕೆಲವು ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ಸಹ ನೀಡಿಲ್ಲ ಎಂದು ಆರೋಪಿಸಿದ ಸಾರ್ವಜನಿಕರು.