ಹುಬ್ಬಳ್ಳಿ; ಕರ್ನಾಟಕದ ಚುನಾಯಿತ ಸದಸ್ಯರು ಹೆಂಗಸರೋ ಗಂಡಸರೋ ಎಂಬುವಂತ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಸಂಸದರು ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸಿ.ಎಂ.ಇಬ್ರಾಹಿಂ ಅವರಿಗೆ ಯಾವಾಗ ಜ್ಞಾನೋದಯ ಆಗಿದೆ ಅಂತ ಅರ್ಥವಾಗುತ್ತಿಲ್ಲ. ಒಮ್ಮೆ ಸಿದ್ಧರಾಮಯ್ಯನವರಿಗೆ, ಕಾಂಗ್ರೆಸ್ಸಿಗೆ ಬೈಯುತ್ತಾರೆ. ಮತ್ತೊಮ್ಮೆ ಜೆಡಿಎಸ್ ಗೆ ಬೈತಾರೆ. ಆದರೆ ಅವರ ಸ್ಥಾನ ಏನು..? ತಾವು ಎಲ್ಲಿದ್ದೀರಿ ಎಂಬುವುದರ ಬಗ್ಗೆ ಮೊದಲು ಖಚಿತ ಪಡಿಸಿಕೊಂಡು ಆಮೇಲೆ ಕೇಂದ್ರದ ಬಗ್ಗೆ ಮಾತನಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹದಾಯಿ ಬಗ್ಗೆ ಅವರಿಗೆ ಇವರು, ಇವರಿಗೆ ಅವರು ಟೀಕೆ ಮಾಡುವ ಬದಲಿಗೆ ಸಾಂಘಿಕವಾಗಿ ಪ್ರಯತ್ನ ಮಾಡಬೇಕು. ರಾಜಕಾರಣವನ್ನು ಬಿಟ್ಟು ಪ್ರಾಮಾಣಿಕ ಪ್ರಯತ್ನ ಮಾಡಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.