ರಾಜ್ಯಪಾಲರು ಸಾಕಷ್ಟು ಸಮಯ ತೆಗೆದುಕೊಂಡು ಪ್ರಾಸಿಕ್ಯೂಶನ್ ಗೆ ಅನುಮತಿ ಕೊಟ್ಟಿದ್ದಾರೆ, ತನಿಖೆ ಸರಿಯಾಗಿ ನಡೆಯಬೇಕೆಂದ್ರೆ ಸಿಎಂ ರಾಜೀನಾಮೆ ನೀಡಬೇಕು, ಕಾನೂನು ಸಲಹೆ ಪಡೆದು ಪ್ರಾಸಿಕ್ಯೂಶನ್ ಗೆ ಅನುಮತಿ ಕೊಟ್ಟಿದ್ದಾರೆ ರಾಜ್ಯಪಾಲರ ಈ ಕ್ರಮ ಯಾವುದೇ ವ್ಯಕ್ತಿಯ ಸಾರ್ವಜನಿಕ ಬದುಕಲ್ಲಿ ಶುದ್ದತೆ ಕಾಪಾಡಲು ಬಹುದೊಡ್ಡ ಹೆಜ್ಜೆ ಯಾರೇ ಇದ್ರೂ ಸಹಿತ ಉನ್ನತ ಸ್ಥಾನದಲ್ಲಿದ್ದಾಗ, ಆರೋಪ ಬಂದಾಗ ತನಿಖೆ ಆಗಬೇಕು ಸಮಗ್ರ ತನಿಖೆ ಆಗಬೇಕು ಎಲ್ಲ ರೀತಿಯ ಕ್ರಮ ಆಗಬೇಕು ಗಂಭೀರ ಸ್ವರೂಪದ ಆರೋಪ ಬಂದ ಹಿನ್ನಲೆ ಪ್ರಾಸಿಕ್ಯೂಶನ್ ಗೆ ಅನುಮತಿ ಕೊಡಲಾಗಿದೆ.
ಭ್ರಷ್ಟಾಚಾರ ಮಾಡಬೇಕಾದ್ರೆ ಭಯ ಇರಬೇಕು ಹೀಗಾಗಿ ಅಳೆದು ತೂಗಿ ಪ್ರಾಸಿಕ್ಯೂಶನ್ ಗೆ ಅನುಮತಿ ಕೊಟ್ಟಿದ್ದಾರೆ ಸಿದ್ದರಾಮಯ್ಯ ತನಿಖೆಗೆ ಸಹಕಾರ ಕೊಡ್ತಾರೆ ಅನ್ನೋ ಭರವಸೆ ಇದೆ ಸಿದ್ದರಾಮಯ್ಯ ತಪ್ಪು ಮಾಡಲ್ಲ ಅಂತಾದ್ರೆ ಏನೂ ತೊಂದರೆ ಆಗಲ್ಲ ಯಾವುದೇ ಭಯ ಪಡೋ ಅಗತ್ಯ ಇಲ್ಲ.
ಸಿದ್ದರಾಮಯ್ಯ ತನಿಖೆಗೆ ಅಡತಡೆ ಮಾಡಬಾರದು ಅವರು ಕಾನೂನು ಹೋರಾಟ ಮಾಡಲಿ, ನಾವು ಬೇಡಾ ಅಂದಿಲ್ಲ ಕಾನೂನು ಹೋರಾಟ ಮಾಡಲು ನಮ್ಮದು ತಕರಾರಿಲ್ಲ
ಕಾನೂನಿನ ನೆಪ ಇಟ್ಕೊಂಡು ತನಿಖೆಗೆ ಅಡ್ಡಮಾಡಬಾರದು
ಕುಮಾರಸ್ವಾಮಿ ಮಂತ್ರಿ ಆಗಿ ಎರಡು ತಿಂಗಳ ಆಯ್ತು ಹೀಗಾಗಿ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಅಗತ್ಯವಿಲ್ಲ ಶಶಿಕಲಾ ಜೊಲ್ಲೆ ವಿರುದ್ಧದ ಆರೋಪ ಸಾಬೀತಾಗಿಲ್ಲ, ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿಲ್ಲ ಅಂತ ಇವರ ವಿರುದ್ಧ ಕೊಡಬಾರದೆಂದಿಲ್ಲ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು.
ಹಂಸರಾಜ್ ಭಾರದ್ವಾಜ ಅವರಿಗೆ ನಾವೇನು ಕಾಂಗ್ರೆಸ್ ಏಜೆಂಟ್ ಎಂದಿರಲಿಲ್ಲ ಆದ್ರೂ ಯಡಿಯೂರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟರು ಕಾಂಗ್ರೆಸ್ ಸರ್ಕಾರವೇ ಐದು ವರ್ಷ ಇರಬೇಕು ನಾವು ಸರ್ಕಾರ ಅಸ್ಥಿರಗೊಳಿಸೋ ಪ್ರಯತ್ನ ಮಾಡಲ್ಲ ಸಿದ್ದರಾಮಯ್ಯನವರೇ ಐದು ವರ್ಷ ಇದ್ರೂ ನಮ್ಮ ಅಭ್ಯಂತರ ಇಲ್ಲ.
ಇವಾಗ ಪ್ರಾಸಿಕ್ಯೂಶನ್ ಗೆ ಅನುಮತಿ ಕೊಟ್ಟ ಹಿನ್ನಲೆ ತನಿಖೆ ಎದುರಿಸಲಿ ಎಂದು ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ.