ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಉತ್ತರ ಪ್ರದೇಶದಲ್ಲಿ ಅಚ್ಚರಿ ಎಂಬಂತೆ ಚಪ್ಪಲಿ ಹೊಲಿಯುವ ಅಂಗಡಿಗೆ ಭೇಟಿ ನೀಡಿದ್ದು. ಈ ಹಿಂದೆ ಸಹ ಬೀದಿ ಬದಿ ವ್ಯಾಪಾರಿಗಳ ಅಂಗಡಿಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳ ಆಲಿಸಿದ್ದಾರೆ. ಇದೀಗ ಉತ್ತರ ಪ್ರದೇಶದ ಒಬ್ಬ ಬಡ ಚಮ್ಮಾರನ ಅಂಗಡಿಗೆ ಭೇಟಿ ನೀಡಿ ಮತ್ತೊಮ್ಮೆ ಗಮನ ಸೆಳೆಯುವ ಮೂಲಕ ಸುದ್ಧಿಯಾಗಿದ್ದಾರೆ. ಪ್ರತಿಪಕ್ಷ ನಾಯಕ (Rahul Gandhi) ರಾಹುಲ್ ಗಾಂಧಿರವರು ದಾರಿಯಲ್ಲಿ ಬದಿಯಲ್ಲಿ ಕಾರನ್ನು ನಿಲ್ಲಿಸಿ ಬಡ ಚಮ್ಮಾರರ ಕುಟುಂಬವನ್ನು ಭೇಟಿ ಮಾಡಿದ್ದಾರೆ.
ಕಾಂಗ್ರೇಸ್ ನಾಯಕ ರಾಗಾ ತಮ್ಮ ವಿರುದ್ದದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸುಲ್ತಾನ್ ಪುರದಲ್ಲಿರುವ ಸಂಸದರು ಹಾಗೂ ಶಾಸಕರ ನ್ಯಾಯಾಲಯಕ್ಕೆ ಹಾಜರಾಗಲು ಶುಕ್ರವಾರ ತೆರಳುತ್ತಿದ್ದರು. ಈ ಸಮಯದಲ್ಲಿ ರಸ್ತೆ ಬದಿಯಲ್ಲಿದ್ದ ಚಮ್ಮಾರ ರಾಮ್ ಚೈತ್ ಎಂಬುವವರ ಅಂಗಡಿಗೆ ಅಚ್ಚರಿ ಎಂಬಂತೆ ಭೇಟಿ ನೀಡಿದ್ದು. ಅವರೊಂದಿಗೆ ಕೆಲ ಸಮಯ ಮಾತುಗಳಾಡಿ ಇದೇ ಸಮಯದಲ್ಲಿ ಚಮ್ಮಾರನ ನಿರ್ದೇಶನದಂತೆ ಚಪ್ಪಲಿಯನ್ನು ಸರಿಪಡಿಸಿ ಹೊಲಿಯುವ ಕೆಲಸ ಸಹ ಮಾಡಿದ್ದಾರೆ.
ಇನ್ನೂ ಸುಮಾರು 40 ವರ್ಷಗಳಿಂದ ರಾಮ್ ಚೈತ್ ಈ ಅಂಗಡಿಯಲ್ಲಿ ಚಮ್ಮಾರ ವೃತ್ತಿಯನ್ನು ಮಾಡುತ್ತಿದ್ದಾರೆ. ಅವರ ಅಂಗಡಿಯಲ್ಲಿ ರಾಹುಲ್ ಗಾಂಧಿ 30 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ರಾಮ್ ಚೈತ್ ಕಷ್ಟಸುಖಗಳನ್ನು ಸಹ ಮನಗೊಟ್ಟು ಆಲಿಸಿದ್ದಾರೆ. ಬಳಿಕ ಇಬ್ಬರೂ ತಂಪು ಪಾನೀಯ ಸೇವನೆ ಮಾಡಿದ್ದಾರೆ. ಜೊತೆಗೆ ರಾಮ್ ಚೈತ್ ರವರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ಸಹ ರಾಹುಲ್ ಗಾಂಧಿಯವರು ನೀಡಿದ್ದಾರೆ ಎನ್ನಲಾಗಿದೆ. ನಂತರದಲ್ಲಿ ರಾಗಾ ತಮ್ಮ ಮನಸಿನಮತನ್ನು ಈ ರೀತಿಯಾಗಿ ಬಿಚ್ಚಿಟ್ಟಿದ್ದರೆ,
ನಾವು ಇಂತಹ ಶ್ರಮಜೀವಿಗಳ ಹಕ್ಕುಗಳಿಗಾಗಿ ನಿರಂತರ ಹೋರಾಟ ಮಾಡುತ್ತಿದ್ದೇವೆ. ಬೀದಿಗಳಿಂದ ಸಂಸತ್ತಿನವರೆಗೂ ಧ್ವನಿ ಎತ್ತುತ್ತಿದ್ದೇವೆ. ಅವರ ಪ್ರಸ್ತುತ ಸುರಕ್ಷಿತ ಹಾಗೂ ಭವಿಷ್ಯವನ್ನು ಸಮೃದ್ದಗೊಳಿಸುವುದು ನಮ್ಮ ಗುರಿ ಎಂದು ಕಾಂಗ್ರೇಸ್ ಪಕ್ಷ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.