ಮೈಸೂರು : ಕೆಆರ್‌ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡುವುದನ್ನು ವಿರೋಧಿಸಿ ನಿನ್ನೆ ಸಂಜೆ ಅಂಟಿಸಿದ್ದ ‘ಪ್ರಿನ್ಸೆಸ್’ ಸ್ಟಿಕ್ಕರ್ ಅನ್ನು ರಾತ್ರೋರಾತ್ರಿ ತೆರವುಗೊಳಿಸಲಾಗಿದೆ.
ಕೆಆರ್‌ಎಸ್ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ರಸ್ತೆ ಎಂದು ನಾಮಕರಣ ಮಾಡುವ ವಿಚಾರ ವಿವಾದದ ಸ್ವರೂಪ ಪಡೆದಿದೆ. ಈ ನಡುವೆ ನಿನ್ನೆ ಇಳಿ ಸಂಜೆ ಹೊತ್ತಿನಲ್ಲಿ ಕೆಲ ಸಂಘಟನೆಗಳ ಕಾರ್ಯಕರ್ತರು ಈ ರಸ್ತೆಯ ಹಲವು ಭಾಗಗಳಲ್ಲಿ ಪ್ರಿನ್ಸನ್ಸ್ ರಸ್ತೆ ಎಂಬ ಸ್ಟೀಕರ್ ಅಂಟಿಸಿ ಪೂಜೆ ಸಲ್ಲಿಸಿದ್ದರು. ಆದರೆ, ಈ ಸ್ಟೀಕರ್‌ಗಳನ್ನು ರಾತ್ರೋರಾತ್ರಿ ಯಾರೋ ಕಿತ್ತು ಹಾಕಿದ್ದಾರೆ. ಸ್ಟೀಕರ್ ಕಿತ್ತಿದ್ದು ಪೊಲೀಸರಾ? ಅಥವಾ ಯಾವುದಾದರೂ ಸಂಘಟನೆಗಳ ಕಾರ್ಯಕರ್ತರಾ ಎಂಬ ಪ್ರಶ್ನೆ ಮೂಡಿದೆ.
ಕೆಆರ್‌ಎಸ್ ರಸ್ತೆಗೆ ಪ್ರಿನ್ಸಸ್ ರೋಡ್ ಎಂದು ಸ್ಟಿಕ್ಕರ್ ಅಂಟಿಸಿ ವಿವಿಧ ಸಂಘಟನೆ ಸದಸ್ಯರು ಪೂಜೆ ಸಲ್ಲಿಸಿದ್ದರು. ಕರ್ನಾಟಕ ರಾಷ್ಟ್ರಸೇನೆ ಸಂಘಟನೆ ಸೇರಿದಂತೆ ಇನ್ನಿತರ ಸಂಘಟನೆಗಳಿಂದ ಪ್ರಿನ್ಸಸ್ ರಸ್ತೆ ಎಂದು ಸ್ಟಿಕ್ಕರ್ ಅಳವಡಿಕೆ ಮಾಡಿದ್ದರು. ಚೆಲುವಾಂಬ ಉದ್ಯಾನದ ವಿವೇಕಾನಂದ ಪ್ರತಿಮೆ ಬಳಿ ಹಾಗೂ ವಿವಿಧೆಡೆ ಪ್ರಿನ್ಸಸ್ ರಸ್ತೆ ಎಂಬ ನಾಮಫಲಕ ಅಳವಡಿಕೆ ಮಾಡಲಾಗಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಕೃಷ್ಣಾಜಮ್ಮಣ್ಣಿ ಭಾವಚಿತ್ರ ಸ್ಟಿಕ್ಕರ್‌ನಲ್ಲಿತ್ತು ಎನ್ನಲಾಗಿದೆ.