ಕಾಪಿರೈಟ್ ಉಲ್ಲಂಘನೆ ಉರುಳು ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಬೆನ್ನು ಬಿಡುವಂತೆ ಕಾಣ್ತಿಲ್ಲ.‌ ಹಾಡು ಕದ್ದ ಕೇಸ್ ನಲ್ಲಿ ಇವತ್ತು ಪೊಲೀಸ್ ವಿಚಾರಣೆ ಎದುರಿಸಿ,‌ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ಅನುಮತಿಯಿಲ್ಲದೆ ಹಾಡು ಬಳಸಿದ್ದ ಬಗ್ಗೆ ಎಫ್.ಐ.ಆರ್ ಆಗಿತ್ತು.‌ ಗಾಳಿಮಾತು ಹಾಗು ನ್ಯಾಯ ಎಲ್ಲಿದೆ ಎಂಬ ಹಾಡು ಕದ್ದಿದಾರೆ ಅಂತ ಎಂ.ಆರ್.ಟಿ ಮ್ಯೂಸಿಕ್ ಸಂಸ್ಥೆ ನವೀನ್ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ರು.‌ ರಕ್ಷಿತ್ ಶೆಟ್ಟಿ ಹಾಗೂ ಅವರ ನಿರ್ಮಾಣ ಸಂಸ್ಥೆ ಪರಂವಾ ಸ್ಟಡಿಯೋಸ್ ಮೇಲೆ ಪೊಲೀಸರು ಎಫ್.ಐ.ಆರ್ ದಾಖಲಿಸಿ ತನಿಖೆಗೆ ಬರುವಂತೆ ನೋಟಿಸ್‌ ನೀಡಿದ್ರು.‌ ಹೀಗಾಗಿ ಇವತ್ತು ಪೊಲೀಸರ ಮುಂದೆ ರಕ್ಷಿತ್ ಶೆಟ್ಟಿ ಹಾಜರಾಗಿದ್ರು.

ವಿಚಾರಣೆಗೆ ಹಾಜರಾದ ನಟ ರಕ್ಷಿತ್ ಶೆಟ್ಟಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ರು.‌ ನ್ಯಾಯ ಎಲ್ಲಿದೆ ಮತ್ತು ‘ಒಮ್ಮೆ ನಿನ್ನನ್ನೂ ಕಣ್ತುಂಬ ನೋಡುವಾಸೆ ಹಾಡಿನ‌ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ರು. ಮೊದಲು ಚಿತ್ರದಲ್ಲಿ ಬಳಕೆಯಾಗಿರುವ ಹಾಡಿನ ತುಣುಕು, ಸಿನಿಮಾದ ಯಾವ ಭಾಗದಲ್ಲಿ, ಯಾವ ರೀತಿಯಲ್ಲಿ ಬಳಕೆಯಾಗಿದೆ ಅಂತ ತನಿಖಾಧಿಕಾರಿಗಳಿಗೆ ತೋರಿಸಿ, ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ರು

ಸತತ ಎರಡು ಗಂಟೆ ವಿಚಾರಣೆ ಎದುರಿಸಿ ಹೊರ ಬಂದ ರಕ್ಷಿತ್ ಶೆಟ್ಟಿ, ಕೇಸ್ ಬಗ್ಗೆ ಮೊದಲ ಬಾರಿಗೆ ರಿಕ್ಷನ್ ನೀಡಿದ್ರು. ಇದು ನನ್ನ ಪ್ರಕಾರ ಕಾಪಿ ರೈಟ್ ಉಲ್ಲಂಘನೆಯಲ್ಲ ಅಂದ್ರು.‌ ಕನ್ನಡದ ಹಾಡನ್ನ ಕನ್ನಡ ಚಿತ್ರದಲ್ಲಿ ಬಳಕೆ ಮಾಡುವಂತೆಯೇ ಇಲ್ವಾ ಅಂತಾನು ಪ್ರಶ್ನಿಸಿದ ರಕ್ಷಿತ್ ಶೆಟ್ಟಿ, ಮುಂದಿನ ಕಾನೂನು ಹೋರಾಟ ಕೋರ್ಟ್ ನಲ್ಲಿ ನಡೆಸಲಾಗುತ್ತೆ ಅಂದ್ರು.

ಒಟ್ಟಾರೆ ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿಗೆ ಕಾಪಿರೈಟ್ಸ್ ಕಂಟಕ ಬಿಟ್ಟು ಬಿಡದೆ ಕಾಡ್ತಿದೆ. ಕಿರಿಕ್ ಪಾರ್ಟಿ ನಂತರ ಈಗ ಬ್ಯಾಚುಲರ್ಸ್ ಪಾರ್ಟಿ ಸಿನಿಮಾದ ಹಾಡು ಕದ್ದು ಆರೋಪ ಸುತ್ತಿಕೊಂಡಿದ್ದು, ಆರೋಪ ಮಾಡಿದವರ ಮೇಲೆ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

Leave a Reply

Your email address will not be published. Required fields are marked *