ರಾಯಚೂರು : 57.64 ಲಕ್ಷ ರೂ. ಮೊತ್ತದ ಕಾಮಗಾರಿಯಲ್ಲಿ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ, ರಾಯಚೂರಿನ ಲಿಂಗಸುಗೂರು ಪುರಸಭೆಯ ಮುಖ್ಯಾಧಿಕಾರಿ ರೆಡ್ಡಿರಾಯನಗೌಡ ಅವರನ್ನು ಅಮಾನತುಗೊಳಿಸಲಾಗಿದೆ.
ಮಸ್ಕಿ ಪುರಸಭೆಯ ಮುಖ್ಯಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಾಮಗಾರಿಯು ನಿಯಮಬದ್ಧವಲ್ಲದೇ ಹತ್ತುಕೊಂಡಿದ್ದು, ಆರ್ಥಿಕ ನಷ್ಟ ಉಂಟುಮಾಡಿದೆ. ಪೀಠೋಪಕರಣಗಳ ಅಳವಡಿಕೆಯಲ್ಲಿ ಕೂಡ ನಿಯಮ ಉಲ್ಲಂಘನೆಗಳು ನಡೆದವು. ಇದಕ್ಕೆ ಸಂಬಂಧಿಸಿದಂತೆ ದುರುಗರಾಜ್ ವಟಗಲ್ ಎಂಬವರು ದೂರು ನೀಡಿದ್ದಾರೆ.
ದೂರು ಪ್ರಕಾರ ತನಿಖೆ ನಡೆಸಿದ ಬಳಿಕ, ಆರೋಪಗಳು ಸಾಬೀತಿಯಾಗಿದೆ. ಕರ್ತವ್ಯಲೋಪ, ಹಣದ ದುರ್ಬಳಕೆ ಹಾಗೂ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ, ರಾಯಚೂರು ಜಿಲ್ಲಾಧಿಕಾರಿ ನಿತೀಶ್.ಕೆ ಅವರು ರೆಡ್ಡಿರಾಯನಗೌಡರನ್ನು ಅಮಾನತುಗೊಳಿಸುವಂತೆ ಆದೇಶ ನೀಡಿದ್ದಾರೆ.