ಬೆಂಗಳೂರು : ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಬೆಂಗಳೂರಿಂದ ಮೈಸೂರಿಗೆ ಪಾದಯಾತ್ರೆ ಮಾಡಿದಾಗಲೇ ಅದು ರಾಜಕೀಯಪ್ರೇರಿತ ಅಂತ ತಾನು ಹೇಳಿದ್ದೆ, ನಗರಾಭಿವೃದ್ಧಿ ಇಲಾಖೆಯು ಜಮೀನುಗಳನ್ನು ಸ್ವಾಧೀನ ಮಾಡಿಕೊಂಡಾಗ ಭೂಮಿ ಕಳೆದುಕೊಂಡವರು ಬದಲೀ ಜಾಗವನ್ನು ಕೇಳುತ್ತಾರೆ.
ಸಿಎಂ ಸಿದ್ದರಾಮಯ್ಯ ಪತ್ನಿ ಸಹಿತ ಕೇಳಿದ್ದಾರೆ, ಅದರಲ್ಲಿ ತಪ್ಪೇನು ಬಂತು ಎಂದು ಡಿಕೆ ಶಿವಕುಮಾರ್ ಹೇಳಿದರು. ಅವರಿಗೆ ಸಿಕ್ಕ ನಿವೇಶನಗಳು ವಿವಾದಕ್ಕೆ ಸಿಲುಕಿದಾಗ ಅವುಗಳನ್ನು ಮುಡಾಗೆ ವಾಪಸ್ಸು ಕೊಟ್ಟು ದೊಡ್ಡತನ ಪ್ರದರ್ಶಿಸಿದ್ದಾರೆ, ಲೋಕಾಯುಕ್ತ ಒಂದು ಸ್ವಾಯತ್ತ ಸಂಸ್ಥೆ ಎಂದು ಹೈಕೋರ್ಟ್ ಹೇಳಿದೆ ಅಂತ ಡಿಸಿಎಂ ಡಿಕೆಶಿ ಹೇಳಿದರು.