ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಆರೋಪ ವಿಚಾರ ಸಂಬಂಧ ಎಂಎಲ್ಸಿ ಸಿ.ಟಿ ರವಿ ಅವರನ್ನು ಬಂಧಿಸಿ ಸುತ್ತಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ತಲೆತಂಡವಾಗಿದೆ.
ಕರ್ತವ್ಯ ಲೋಪದಡಿ ಖಾನಾಪುರ ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ್ ನಾಯಕ್ ಅವರನ್ನು ಅಮಾನತು ಮಾಡಿ ಬೆಳಗಾವಿ ಉತ್ತರ ವಲಯದ ಐಜಿಪಿ ವಿಕಾಸ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಬಿಜೆಪಿ ನಾಯಕರನ್ನು ಠಾಣೆಯೊಳಗೆ ಬಿಟ್ಟಿದ್ದಕ್ಕೆ ಅಮಾನತು ಮಾಡಲಾಗಿದೆ.
ಸಿಟಿ ರವಿ ಬಂಧನ ನಂತರ ಬಿಜೆಪಿ ನಾಯರಕನ್ನು ಠಾಣೆಯೊಳಗೆ ಬಿಟ್ಟಿದ್ದರು. ಈ ವೇಳೆ ಖಾನಾಪುರ ಠಾಣೆಯಲ್ಲಿ ಬಿಜೆಪಿ ನಾಯಕರು ಸಭೆ ಮಾಡಿದ್ದರು. ಆಗ ಕಮಿಷನರ್ ಯಡಾಮಾರ್ಟಿನ್ ಡಿಸಿಪಿ ರೋಹನ್ ಇದ್ದರು. ಕಮಿಷನರ್ ಅನುಮತಿ ಮೇರೆಗೆ ಬಿಜೆಪಿ ನಾಯಕರನ್ನು ಠಾಣೆಯೊಳಗೆ ಬಿಟ್ಟಿದ್ದರು ಎನ್ನಲಾಗಿದೆ.