ಚಿಕ್ಕಬಳ್ಳಾಪುರ: ದೀಪಾವಳಿಗೆ ಸರ್ಕಾರ ಬೀಳಲಿದೆ ಎಂಬ ಸಿಟಿ ರವಿ ಹೇಳಿಕೆ ವಿಚಾರವಾಗಿ ಇದೀಗ ಚಿಕ್ಕಬಳ್ಳಾಪುರ ದಲ್ಲಿ ಸಂಸದ ಸುಧಾಕರ್ ಅವರು ಸ್ಪಷ್ಟ ಹೇಳಿಕೆಯನ್ನು ನೀಡಿದ್ದಾರೆ.
ಸಿಟಿ ರವಿಯವರ ಪರವಾಗಿ ಬ್ಯಾಟಿಂಗ್ ಮಾಡಿರುವ ಸಂಸದ ಸುಧಾಕರ್ ಅವರು , ಸಿಟಿ ರವಿ ಹಿರಿಯ ನಾಯಕರು, ಈ ಹಿಂದೆ ನಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದ ವರು ರಾಜಕೀಯ ಬೆಳವಣಿಗೆಗಳ ತುಂಬಾ ಚೆನ್ನಾಗಿ ಅರಿತವರು ಹಾಗಾಗಿ ರವಿ ಅವರಿಗೆ ಎಲ್ಲದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿರುತ್ತದೆ.
ಅದರ ಆಧಾರದ ಮೇಲೆ ಅವರು ಈ ಹೇಳಿಕೆಯನ್ನು ನೀಡಿರುತ್ತಾರೆ ಅಲ್ಲದೇ ಸಿಟಿ ರವಿಯವರು ಯಾರ ಬಗ್ಗೆಯೂ ಲಘುವಾಗಿ ಮಾತನಾಡುವವರಲ್ಲ ಒಂದು ವೇಳೆ ಅವರು ಮಾತನಾಡಿದ್ದಾರೆ ಅಂದ್ರೆ ನಾವು ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ ಎಂದು ಸಂಸದ ಸುಧಾಕರ್ ಅವ್ರು ತಿಳಿಸಿದ್ದಾರೆ.