ದಳಪತಿ ವಿಜಯ್ ಕೊನೆ ಚಿತ್ರಕ್ಕೆ ಯಾವ ಶೀರ್ಷಿಕೆ ಇಡಲಾಗುತ್ತದೆ ಎಂಬ ಚರ್ಚೆ ಜೋರಾಗಿತ್ತು. ಅವರ ಮೊದಲ ಸಿನಿಮಾದ ಟೈಟಲ್ನೇ ಇದಕ್ಕೂ ಇಡಲಾಗುತ್ತದೆ ಎಂಬಿತ್ಯಾದಿ ಚರ್ಚೆಗಳು ಜೋರಾಗಿದ್ದವು. ಆದರೆ, ಸಿನಿಮಾಗೆ ಬೇರೆಯದೇ ಟೈಟಲ್ ನೀಡಲಾಗಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಕಡೆಯಿಂದ ಘೋಷಣೆ ಆಗಿದೆ. ಈ ಚಿತ್ರಕ್ಕೆ ‘ಜನ ನಾಯಗನ್’ ಎನ್ನುವ ಶೀರ್ಷಿಕೆ ಇಡಲಾಗಿದೆ.
ದಳಪತಿ ವಿಜಯ್ ಅವರು ಈಗ ಮಾಡುತ್ತಿರುವುದು ಅವರ ವೃತ್ತಿ ಜೀವನದ 69ನೇ ಸಿನಿಮಾ. ಇದಾದ ಬಳಿಕ ಅವರು ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅವರು ಹೊಸ ಪಾರ್ಟಿ ಕೂಡ ಲಾಂಚ್ ಮಾಡಿದ್ದಾರೆ. ಮುಂದಿನ ವರ್ಷ ತಮಿಳಿನಾಡಿನಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಅವರು ಕೂಡ ಸ್ಪರ್ಧಿಸಲಿದ್ದಾರೆ. ಈ ಕಾರಣಕ್ಕೆ ಅವರ ಕೊನೆಯ ಚಿತ್ರವನ್ನು ರಾಜಕೀಯ ಹಿನ್ನೆಲೆ ಹೊಂದಿರಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ದಳಪತಿ ವಿಜಯ್ ಅವರು ವಾಹನ ಏರಿದ್ದಾರೆ. ಅದರ ಮೇಲೆ ನಿಂತು ಸೆಲ್ಫೀ ತೆಗೆದುಕೊಳ್ಳುತ್ತಿದ್ದಾರೆ. ಅವರ ಸುತ್ತಲೂ ಜನ ನಿಂತಿದ್ದಾರೆ. ಈ ಪೋಸ್ಟರ್ ಹಾಗೂ ಟೈಟಲ್ ನೋಡಿದರೆ ಇದೊಂದು ರಾಜಕೀಯ ಕಥಾ ಹಿನ್ನೆಲೆ ಹೊಂದಿರುವ ಚಿತ್ರ ಅನ್ನೋದು ಸ್ಪಷ್ಟವಾಗುತ್ತದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಎಚ್. ವಿನೋದ್ ಅವರು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅನಿರುದ್ಧ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ವೆಂಕಟರ್ ನಾರಾಯಣ್ ಅವರು ‘ಕೆವಿಎನ್ ಪ್ರೊಡಕ್ಷನ್’ ಅಡಿಯಲ್ಲಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಜಗದೀಶ್ ಪಳನಿಸ್ವಾಮಿ, ಲೋಹಿತ್ ಎನ್ಕೆ ಚಿತ್ರವನ್ನು ನಿರ್ಮಾಣ ಮಾಡುವುದರಲ್ಲಿ ವೆಂಕಟ್ ಜೊತೆ ಕೈ ಜೋಡಿಸಿದ್ದಾರೆ. ವಿಜಯ್ ಅವರ ಕೊನೆಯ ಚಿತ್ರ ಎಂಬ ಕಾರಣಕ್ಕೆ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾ ರಾಜಕೀಯ ಕಥಾ ಹಂದರ ಹೊಂದಿದೆ ಎಂಬುದು ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ.