ಆಗಷ್ಟ್ 15 ರ ಬೆಳಗ್ಗೆ 7:50 ರ ಸುಮಾರಿಗೆ ಸರ್ಜಾಪುರ ರಸ್ತೆಯಲ್ಲಿ ಶರವೇಗದಲ್ಲಿ ಬಂದ ಕಾರು ಭೀಕರವಾಗಿ ಬೈಕ್ ಗೆ ಡಿಕ್ಕಿಹೊಡೆದಿದೆ. ಕಾರು ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್ ಸಮೇತ ರಸ್ತೆಯಲ್ಲಿ ಹಾರಿ ಬಿದ್ದ ಬೈಕ್ ಸವಾರ.
ಡಿಕ್ಕಿಯಾದ ರಭಸಕ್ಕೆ ಬೈಕ್ ಒಂದು ಕಡೆ, ಧರಿಸಿದ್ದ ಹೆಲ್ಮೆಟ್ ಒಂದು ಕಡೆ ಬೈಕ್ ಸವಾರ ಎಗರಿ ರಸ್ತೆಮೇಲೆ ಬಿದ್ದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಪವಾಡ ಸದೃಶ್ಯರೀತಿ ಬಚಾವಾಗಿರೋ ಬೈಕ್ ಚಾಲಕ.
ಅಪಘಾತದ ದೃಶ್ಯದ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು. ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ