ರಾಜ್ಯದಲ್ಲಿ ಡೆಂಗ್ಯೂ ಜ್ವರ ಜೋರಾದ ಆರ್ಭಟವನ್ನೇ ನಡೆಸುತ್ತಿದೆ. ದಿನದಿಂದ ದಿನಕ್ಕೆ ಈ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಕಳೆದ 24 ಗಂಟೆಗಳಲ್ಲಿ (ಶುಕ್ರವಾರ) ಒಂದು ವರ್ಷದೊಳಗಿನ 6 ಹಸುಗೂಸುಗಳಲ್ಲಿ ಡೆಂಗ್ಯೂ ಪತ್ತೆಯಾಗಿದೆ.

ಇಲ್ಲಿಯವರೆಗೂ ಒಂದು ವರ್ಷದೊಳಗಿನ 390 ಮಕ್ಕಳಲ್ಲಿ ಡೆಂಗ್ಯೂ ಇರುವುದು ದೃಡಪಟ್ಟಿದೆ. ಕಳೆದ 24 ಗಂಟೆಗಳಲ್ಲಿ ಒಂದು ವರ್ಷದಿಂದ 18ವರ್ಷದೊಳಗಿನ ಸುಮಾರು 90 ಮಂದಿಯಲ್ಲಿ ಡೆಂಗ್ಯೂ ಪತ್ತೆ ಹಚ್ಚಲಾಗಿದ್ದು, ಇಲ್ಲಿಯವರೆಗೂ ಒಂದು ವರ್ಷದಿಂದ 18 ವರ್ಷ ಮೇಲ್ಪಟ್ಟ 182 ಜನರಲ್ಲಿ ಡೇಂಗ್ಯೂ ತನ್ನ ಹಟ್ಟಹಾಸ ಮೆರೆದಿದೆ ಅಲ್ಲದೆ ರಾಜ್ಯದಲ್ಲಿ 1753 ಡೆಂಗ್ಯೂ ಪ್ರಕರಣಗಳು ಸಕ್ರಿಯವಾಗಿದೆ.

ಒಟ್ಟಾರೆಯಾಗಿ ರಾಜ್ಯದಲ್ಲಿ , ಇಲ್ಲಿಯವರೆಗೆ ವರದಿಯಾಗಿರುವ ಪ್ರಕಾರ 18 ವರ್ಷ ಮೇಲ್ಪಟ್ಟ 12989 ಮಂದಿಗಳಲ್ಲಿ ಡೆಂಗ್ಯೂ ಇರುವುದು ಧೃಡಪಟ್ಟಿದೆ.

ಒಟ್ಟಾರೆಯಾಗಿ ರಾಜ್ಯದಲ್ಲಿ ಇಲ್ಲಿಯವರೆಗೂ 20729 ಡೆಂಗ್ಯೂ ಪ್ರಕರಣಗಳು ವರದಿಯಾಗಿದೆ!

Leave a Reply

Your email address will not be published. Required fields are marked *