ಮಾತಿನಿಂದಲೇ ಬಿಗ್ ಬಾಸ್ ಟ್ರೋಫಿ ಗೆಲ್ಲಬಹುದು ಎಂಬ ಭ್ರಮೆಯಲ್ಲಿದ್ದ ಚೈತ್ರಾ ಕುಂದಾಪುರ ಅವರು ಈ ವಾರ ಬಿಗ್‌ ಬಾಸ್‌ನಿಂದ ಎಲಿಮಿನೇಟ್ ಆಗಿದ್ದಾರೆ. ಎಲ್ಲರಿಗೂ ಭಾವುಕವಾಗಿ ವಿದಾಯ ಹೇಳಿದ ಚೈತ್ರಾ ಅವರು ದೊಡ್ಮನೆಯಿಂದ ಬಂದಿದ್ದಾರೆ.

ಆದರೆ ಬಾರಿ ಎಲಿಮಿನೇಷನ್‌ ಪ್ರಕ್ರಿಯೆ ಮಾಡುವಾಗ ಸುದೀಪ್‌ ಟ್ವಿಸ್ಟ್‌ವೊಂದನ್ನು ಕೊಟ್ಟಿದ್ದಾರೆ. ಯಾರು ಔಟ್‌ ಆಗುತ್ತಾರೆ ಎಂಬುದನ್ನು ತಿಳಿಯಲು ಲಕೋಟೆ ಹುಡುಕುವ ಟಾಸ್ಕ್‌ ಅನ್ನು ಸುದೀಪ್‌ ನೀಡಿದ್ದಾರೆ. ಅದರಲ್ಲಿ ಸೇಫ್ ಆದವರ ಹೆಸರು ಬರೆದಿರುತ್ತದೆ ಎಂದು ಸುದೀಪ್ ತಿಳಿಸಿದ್ದರು.

ಮನೆ ಪೂರ್ತಿ ಸುತ್ತಾಡಿ ಧನರಾಜ್ ಮತ್ತು ಚೈತ್ರಾ ಅವರು ಲಕೋಟೆ ಹುಡುಕಿದರು. ಹುಡುಕುವ ವೇಳೆ, ಧನರಾಜ್ ಅವರು ‘ಸ್ವಾಮಿ ಕೊರಗಜ್ಜ’ ಎಂದು ದೇವರನ್ನು ಸ್ಮರಿಸಿದರು. ಅಚ್ಚರಿ ಎಂದರೆ, ಧನರಾಜ್ ಅವರು ಸೇಫ್ ಆಗಿದ್ದಾರೆ ಎನ್ನಲಾಗಿದೆ.

ಚೈತ್ರಾ ಕುಂದಾಪುರ ಅವರು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ಹೋಗಿ ಬಂದಿದ್ದಾಗ ಹೊರ ಜಗತ್ತಿನ ವಿಷಯಗಳನ್ನೆಲ್ಲ ಅವರು ಮನೆಯ ಒಳಗೆ ಹೇಳಿದ್ದರು. ಆಗ ಅವರಿಗೆ ಸುದೀಪ್ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದರು. ಸುದೀಪ್ ಬುದ್ಧಿ ಹೇಳಿದ ಮೇಲೆ ಕೂಡ ಚೈತ್ರಾ ಅವರು ತಮ್ಮದೇ ಸರಿ ಎಂಬಂತೆ ವರ್ತಿಸಿದ್ದರು.

2ಕ್ಕೂ ಹೆಚ್ಚು ಬಾರಿ ಕಳಪೆ ಪಟ್ಟ ತೆಗೆದುಕೊಂಡಿದ್ದ, ಚೈತ್ರಾ ಕೊನೇ ವಾರದಲ್ಲಿ ಮಾತ್ರ ಅವರಿಗೆ ಎಲ್ಲರಿಂದ ಉತ್ತಮ ಪಟ್ಟ ಸಿಕ್ಕಿತ್ತು. ಕ್ಯಾಪ್ಟನ್ ಆಗಲು ಅವರಿಗೆ ಸಾಧ್ಯವಾಗಲಿಲ್ಲ. ಕಿಚ್ಚನ ಚಪ್ಪಾಳೆ ಕೂಡ ಸಿಗಲಿಲ್ಲ. ಆ ಬೇಸರದಲ್ಲೇ ಅವರು ಬಿಗ್ ಬಾಸ್ ಆಟವನ್ನು ಅಂತ್ಯಗೊಳಿಸಿದ್ದಾರೆ. ಕಣ್ಣೀರಿಡುತ್ತಲೇ ಬಿಗ್‌ ಬಾಸ್‌ ಮನೆಗೆ ಚೈತ್ರಾ ಗುಡ್‌ ಬೈ ಹೇಳಿದ್ದಾರೆ.

Leave a Reply

Your email address will not be published. Required fields are marked *