Tirumala Updates – ದೇಶದ ಸುಪ್ರಸಿದ್ದ ದೇವಾಲಯಗಳಲ್ಲಿ ಒಂದಾಗಿರುವ ತಿರುಪತಿ ತಿಮ್ಮಪ್ಪನ ದೇವಾಲಯವನ್ನು ವಿಶ್ವದ ಅತೀ ಶ್ರೀಮಂತ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತಿರುಮಲದಲ್ಲಿ ನೆಲೆಸಿರುವ ಕಲಿಯುಗ ದೈವವೆಂದೇ ಕೀರ್ತಿ ಪಡೆದ ತಿಮ್ಮಪ್ಪನ ದರ್ಶನಕ್ಕೆ ದಿನಂಪ್ರತಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಿರುತ್ತಾರೆ.
ತಿರುಮಲದಲ್ಲಿ ತಿಮ್ಮಪ್ಪ ಎಷ್ಟು ಪ್ರಖ್ಯಾತಿ ಪಡೆದುಕೊಂಡಿದ್ದಾನೋ ಅಷ್ಟೆ ಪ್ರಾಮುಖ್ಯತೆಯನ್ನು ಅಲ್ಲಿನ ಪ್ರಸಾದವಾದ ಲಡ್ಡು ಸಹ ಹೊಂದಿದೆ ಎಂದು ಹೇಳಿದರೆ ತಪ್ಪಾಗಲಾರದು. ಈ ತಿರುಪತಿ ಲಡ್ಡು ಪ್ರಸಾದವನ್ನು ಆರಂಭಿಸಿ ಇಂದಿಗೆ 309 ವರ್ಷಳಾಗಿದೆ.
ತಿರುಮಲದಲ್ಲಿ ಮೊಲದ ಬಾರಿಗೆ 1715 ಆಗಸ್ಟ್ 2 ರಂದು ತಿರುಪತಿ ಲಡ್ಡುವನ್ನು ಶ್ರೀನಿವಾಸನ ಪ್ರಸಾದದ ಸಂಕೇತವಾಗಿ ಪ್ರಾರಂಭಿಸಲಾಯಿತು. ಕೆಲವೊಂದು ವರದಿಗಳು ಹಾಗೂ ನಂಬಿಕೆಯ ಪ್ರಕಾರ ತಿರುಮಲ ದೇವಸ್ಥಾನಕ್ಕೆ ತಿರುಮಲದ ಲಡ್ಡು ಸ್ವೀಕರಿಸದೇ ಹೋದರೇ ಈ ಯಾತ್ರೆ ಪೂರ್ಣಗೊಳ್ಳುವುದಿಲ್ಲ ಎಂದೇ ಹೇಳಲಾಗುತ್ತೆ ಆದ್ದರಿಂದ ಈ ದೇವಾಲಯಕ್ಕೆ ಭೇಟಿ ನೀಡುವ ಪ್ರತಿಯೊಬ್ಬರು ಲಡ್ಡು ಪ್ರಸಾದವನ್ನು ಸ್ವೀಕರಿಸಿಯೇ ಬರುತ್ತಾರೆ ಜೊತೆಯಲ್ಲಿ ಬಂಧು ಮಿತ್ರರಿಗೂ ತರುವುದು ವಾಡಿಕೆಯಾಗಿದೆ.
ಇನ್ನೂ ಅಪಾರ ಬೇಡಿಕೆಯಿರುವ ಈ ಲಡ್ಡು ಪ್ರಸಾದವನ್ನು ತಯಾರಿಸಲು ಪ್ರತಿನಿತ್ಯ 270 ಬಾಣಸಿಗರು ಹಾಗೂ 620 ಮಂದಿ ಲಡ್ಡು ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಾರೆ ಎಂದು ಹೇಳಲಾಗಿದೆ ಹಾಗಾಗಿ ಈ ಮೂಲಕ ತಿಮ್ಮಪ್ಪನ ಪ್ರಸಾದವಾದ ತಿರುಪತಿ ಲಡ್ಡುವಿಗೂ ಕೂಡ ಭಕ್ತಾದಿಗಳಿಂದ ಶುಭಾಶಯಗಳು!.