ಡಾಲಿ ಧನಂಜಯ್ ಇನ್ನುಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೇ ಫೆಬ್ರವರಿ 15 ಹಾಗೂ 16ರಂದು ಮೈಸೂರಿನಲ್ಲಿ ಅದ್ಧೂರಿಯಾಗಿ ಅಭಿಮಾನಿಗಳು, ಕುಟುಂಬಸ್ಥರು ಹಾಗೂ ಹಿತೈಶಿಗಳ ಸಮ್ಮುಖದಲ್ಲಿ ಮದುವೆ ಆಗಲಿದ್ದಾರೆ. ಹೀಗಾಗಿ ಅವರ ಹುಟ್ಟೂರಾದ ಅರಸಿಕೆರೆಯಲ್ಲಿ ಕಾಳೇನ ಹಳ್ಳಿಯಲ್ಲಿ ಮದುವೆ ಸಮಾರಂಭಗಳು ನಡೆಯುತ್ತಿವೆ.

ಧನಂಜಯ್ ಮದುವೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ ಅವರ ಮನೆಯಲ್ಲಿ ಮದುವೆ ಸಮಾರಂಭ ಶುರುವಾಗಿದೆ. ಅವರ ಮನೆಯ ಸಂಪ್ರದಾಯದಂತೆ ಶಾಸ್ತ್ರಗಳು ಆರಂಭ ಆಗಿವೆ. ಹುಟ್ಟೂರಿನಲ್ಲಿ ಇರುವ ಧನಂಜಯ್ ಮದುವೆ ಶಾಸ್ತ್ರದಲ್ಲಿ ಭಾಗಿಯಾಗುತ್ತಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ಧನಂಜಯ ಅವರ ಹುಟ್ಟೂರಾದ ಕಾಳೇನಹಳ್ಳಿಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದಿದೆ. ವಿವಾಹ ಪೂರ್ವ ಸಂಪ್ರದಾಯಗಳನ್ನು ಮಾಡಲಾಗುತ್ತಿದೆ.

ಶನಿವಾರ ಮತ್ತು ಭಾನುವಾರ ಮೈಸೂರಿನಲ್ಲಿ ಡಾಲಿ-ಧನ್ಯತಾ ವಿವಾಹ ನೆರವೇರಲಿದೆ. ಡಾಲಿ ಧನಂಜಯ್ ಅವರ ಮನೆಯಲ್ಲಿ ವಿವಾಹ ಶಾಸ್ತ್ರಗಳು ಆರಂಭ ಆಗಿವೆ. ಮದುವೆಗೂ ಮೊದಲೂ ಹುಟ್ಟೂರಾದ ಕಾಳೇನಹಳ್ಳಿಯಲ್ಲಿ ಕಳೆಗಟ್ಟಿದ ಮದುವೆ ಸಂಭ್ರಮ ಮನೆ ಮಾಡಿದೆ. ಸಂಪ್ರದಾಯದಂತೆ ಅರಸಿಕೆರೆಯ ಜೇನುಕಲ್ಲು ಸಿದ್ದೇಶ್ವರದಲ್ಲಿ ಡಾಲಿ ಧನಂಜಯ ಕೆಂಡ ತುಳಿದಿದ್ದಾರೆ. ನಂತರ ಮನೆಯಲ್ಲಿ ಮನೆದೇವರ ಪೂಜೆಯನ್ನು ಧನಂಜಯ ಪೂರೈಸಿದ್ದಾರೆ.

ಧನಂಜಯ್ ತಮ್ಮ ಕುಟುಂಬದ ಸಂಪ್ರದಾಯದಂತೆ ಮೊದಲು ಅರಸಿಕೆರೆಯ ಜೇನುಕಲ್ಲು ಸಿದ್ದೇಶ್ವರ ದೇವರ ಕೊಂಡ ತುಳಿದಿದ್ದಾರೆ. ಅದಕ್ಕೂ ಮುನ್ನ ದೇವಸ್ಥಾನನಕ್ಕೆ ಕುಟುಂಬಸ್ಥರು ಹಾಗೂ ಊರಿಗೂ ಮಧುಮಗನನ್ನು ಮೆರವಣಿಗೆ ಮೂಲಕ ಕರೆದುಕೊಂಡು ಬಂದರು. ಬಳಿಕ ಡಾಲಿ ಮನೆಯಲ್ಲಿ ಮನೆದೇವರ ಪೂಜೆ ನೆರವೇರಿಸಿದರು. ಈ ವೇಳೆ ಧನಂಜಯ್ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *