ತುಮಕೂರು : ಒಕ್ಕಲಿಗ ಸಮುದಾಯಕ್ಕೆ ಪ್ರಪಂಚದಲ್ಲಿಯೇ ಒಂದು ಘನತೆ, ಗೌರವವಿದೆ. ರಾಜಕೀಯ ಕಾರಣಕೋಸ್ಕರ ಬೇರೆ ಬೇರೆ ಪಕ್ಷದಲ್ಲಿರುವ ನಾಯಕರು ಮಾತನಾಡುವಾಗ ಎಚ್ಚರಿಕೆ ವಹಿಸಿ, ಸಮಾಜದ ಮನಸ್ಸುಗಳಿಗೆ ನೋವಾಗದಂತೆ ಮಾಡುವುದು ಅತ್ಯಂತ ಸೂಕ್ತ ಎಂದು ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿ ಕಿವಿಮಾತು ಹೇಳಿದರು.

ತುಮಕೂರು ನಗರದಲ್ಲಿ ರಾಜ್ಯ ಒಕ್ಕಲಿಗರ ಸಂಘ ಹಾಗೂ ತುಮಕೂರು ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 515 ಜನ್ಮ ಜಯಂತಿ ಹಾಗೂ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರ ಕೊಡುಗೆಯೂ ಈ ಸಮಾಜಕ್ಕೆ ಇದೆ. ಹಾಗಾಗಿಯೇ ನೀವು ಆಡುವ ಮಾತನ್ನು ಸಮಾಜ ಕೇಳುತ್ತಿದೆ. ಸಮಾಜಕ್ಕೆ ಅಗೌರವ ತರುವಂತಹ,ಮುಜುಗರ ಉಂಟು ಮಾಡುವಂತಹ ಮಾತುಗಳನ್ನು ಆಡಬೇಡಿ, ಸಮಾಜದ ಹೊರತಾಗಿ ನಾವ್ಯಾರು ಅಲ್ಲ ಎಂದು ನೇರವಾಗಿ ಹೇಳಿದರು.

ರಾಜ್ಯ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಎನ್.ಬಾಲಕೃಷ್ಣ ಮಾತನಾಡಿ, ತುಮಕೂರು ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಆಡಳಿತ ಅಧಿಕಾರಿ ನೇಮಕವಾಗಿರುವುದು ತಲೆ ತಗ್ಗಿಸುವಂತಹ ವಿಚಾರವಾಗಿದೆ. ನಾನು ಎನ್ನದೆ ನಾವು ಎಂದರೆ ಎಲ್ಲವೂ ಸುಗಮ, ಒಳ್ಳೆಯ ಕೆಲಸ ಮಾಡುವವರ ಬೆನ್ನು ತಟ್ಟಬೇಕಿದೆ. ಈ ವರ್ಷ ಸಂಘದಲ್ಲಿ ಸದಸ್ಯರ ನೊಂದಣಿ ಶುಲ್ಕು ಸುಮಾರು 120 ಕೋಟಿ ರೂ ಇದ್ದು. ಇದರಲ್ಲಿ ಬರುವ ಬಡ್ಡಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 5-10 ಎಕರೆ ಜಮೀನು ಖರೀದಿಸಿ, ವಿದ್ಯಾಸಂಸ್ಥೆಗಳ ತೆರೆಯಲು ಅಗತ್ಯ ಕ್ರಮವಹಿಸಲಾಗುತ್ತಿದೆ ಎಂದರು.

Leave a Reply

Your email address will not be published. Required fields are marked *