ಮನೆಯಲ್ಲಿ ಸುಖ- ಶಾಂತಿ – ನೆಮ್ಮದಿ ಬೇಕು ಎಂಬಾದಲ್ಲಿ ಮನೆಯ ವಾಸ್ತು ಬಹಳ ಮುಖ್ಯವಾಗಿರುತ್ತದೆ. ಒಂದು ವೇಳೆ ಮನೆಯ ವಾಸ್ತು ಸರಿ ಇಲ್ಲದಿದ್ದಾಗ ಎಷ್ಟೇ ಪ್ರಯತ್ನ ಪಟ್ಟರು ನಮಗೆ ಮನಶಾಂತಿ ಸಿಗುವುದಿಲ್ಲ , ನಮ್ಮೆಲ್ಲ ಯಶಸ್ಸಿಗೆ ಹಾಗೂ ವೃದ್ಧಿಗೆ ವಾಸ್ತು ಬಹಳ ಮುಖ್ಯ ಹಾಗಾಗಿ ನಮ್ಮನೆ ವಾಸ್ತುವನ್ನು ಹೇಗೆ ಸರಿಪಡಿಸಿಕೊಳ್ಳುವುದು ಹೇಗೆ , ಅಂತೆಯೇ ನೆಮ್ಮದಿಯ ಜೀವನಕ್ಕಾಗಿ ಮನೆಯ ವಾಸ್ತುವುನ ಬಗ್ಗೆ ತಿಳಿದುಕೊಳ್ಳಬೇಕಾಗಿರುವ ಅಂಶಗಳು ಹೀಗಿವೆ;
01🌹, ಮನೆಯ ಸುತ್ತಲೂ ಕನಿಷ್ಠ ಎರಡು ಅಡಿ ಜಾಗ ಬಿಟ್ಟು ರಕ್ಷಣಾ ಗೋಡೆಯನ್ನು ನಿರ್ಮಾಣ ಮಾಡಿದರೆ ಅಲ್ಲಿ ಅಷ್ಟ ದಿಕ್ಪಾಲಕರಿಂದ ರಕ್ಷಣೆ ಸಿಗುವುದು,
02🌹, ನೈರುತ್ಯ ಮೂಲೆಯನ್ನು ತಗ್ಗು ಅಥವಾ ಎತ್ತರ ಮಾಡದೆ ಸರಿಯಾದ ಮಟ್ಟಕ್ಕೆ ಕಟ್ಟಿದರೆ ಆ ಮನೆಯು ಸಂಪತ್ತಿನಿಂದ ಕೂಡಿರುತ್ತದೆ,
03🌹, ವಾಸ್ತು ಬಲ ಇರುವ ನಿವೇಶನವು ಸ್ವಲ್ಪ ಬಲವಿದ್ದರೂ ಸಾಕು ಮನೆಯ ಒಡೆಯನಿಗೆ ಬಹಳ ಒಳ್ಳೆಯದು,
03🌹, ಯಾರೇ ಆಗಲಿ ಮನೆ ಕಟ್ಟಲು ಪ್ರಾರಂಭಿಸುವ ಮೊದಲು ಕೆಲವು ವಿಧಿ ವಿಧಾನಗಳನ್ನು ಪಾಲಿಸುವುದು ಸೂಕ್ತ ಕಾರಣ ಅವರು ಹಾಗೂ ಅವರ ನಂತರದ ತಲಮಾರಿನವರಿಗೂ ಅನುಕೂಲಕರ, ಆದ್ದರಿಂದ ಸರಳ ವಾಸ್ತುವನ್ನು ಪಾಲಿಸುವುದು ಸೂಕ್ತ,
04🌹, ನಿವೇಶನದ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ದೊಡ್ಡ ಮರಗಳು ಎತ್ತರದ ದಿಣ್ಣೆ ಗುಡ್ಡ ಬೆಟ್ಟಗಳು ಅಥವಾ ಅತಿ ಎತ್ತರದ ಕಟ್ಟಡಗಳು ಇದ್ದರೆ ಶುಭ ಹೀಗೆ ಪೂರ್ವ ಹಾಗೂ ಉತ್ತರ ದಿಕ್ಕಿನಲ್ಲಿ ಇರಬಾರದು,
05🌹,ಆವರಣದ ಗೋಡೆಯ ನಿರ್ಮಾಣದ ಕೆಲಸವನ್ನು ನಿವೇಶನದ ಆಗ್ನೇಯ ಭಾಗದಿಂದ ಆರಂಭಿಸಬೇಕು,
06🌹, ಕಟ್ಟಡದಲ್ಲಿ ಹೆಚ್ಚುವರಿ ಲಂಬವಾಗಿ ಏನಾದರೂ ನಿರ್ಮಾಣ ಮಾಡಬೇಕಿದ್ದರೆ ದಕ್ಷಿಣ ಅಥವಾ ಪಶ್ಚಿಮ ಭಾಗ ಆಯ್ಕೆ ಮಾಡಿಕೊಳ್ಳಿ,
07🌹, ಈಶಾನ್ಯದಲ್ಲಿ ಪಾಯ ತೋಡಿದರೆ ಯಾವ ಅಡೆತಡೆ ಇಲ್ಲದೆ ಬಹಳ ಬೇಗ ಮನೆ ನಿರ್ಮಾಣವಾಗಿ ಸಂತೋಷವಾಗಿ, ವಾಸ ಮಾಡಬಹುದು,
08🌹, ಮನೆಯ ನಾಲ್ಕು ಬದಿಗಳಲ್ಲಿ ರಸ್ತೆ ಇದ್ದರೆ ಶುಭ,
09🌹, ಮನೆಯ ನಾಲ್ಕು ಬದಿಗಳ ನಡುವಿನಲ್ಲಿ ರಸ್ತೆಗಳಿದ್ದರೆ ಮಧ್ಯಮ ಫಲ,
10🌹, ವ್ಯಾಘ್ರ ಮುಖ ಆಕಾರದ ನಿವೇಶನ ರಸ್ತೆಯ ಎದುರುಗಿದ್ದರೆ ವ್ಯಾಘ್ರ ಮುಖ ವ್ಯಾಪಾರಿ ಸಂಸ್ಥೆಗಳನ್ನು ನಿರ್ಮಿಸಬಹುದು,
11🌹, ವಾಸ್ತು ಮಂಡಲವನ್ನು ಗಮನಿಸಿದಾಗ ಯಾವ ದಿಕ್ಕಿನಲ್ಲಿ ಏನು ಪ್ರಭಾವ ಇದೆ ಎಂಬುದು ತಿಳಿದುಬರುವುದು, ಅದನ್ನು ಅರಿತು ನಿರ್ಮಾಣ ಅಳವಡಿಸಿಕೊಂಡಾಗ ನಮಗೆ ನೆಮ್ಮದಿಯ ಬದುಕು ಒಲಿದು ಬರುವುದು, ಎಲ್ಲವನ್ನು ಕಡೆಗಣಿಸಿ ಮುಂದುವರೆದರೆ ವಾಸ್ತುವಿನ ದುಷ್ಪರಿಣಾಮಗಳನ್ನು ನಾವೇ ಆಹ್ವಾನ ನೀಡಿದಂತಾಗುತ್ತದೆ