ಬೆಂಗಳೂರು : ಏರೋ ಇಂಡಿಯಾ-2025 ರಲ್ಲಿ ಭಾರತೀಯ ಸೇನಾ ವಿಂಗ್ ಕಮಾಂಡರ್ಗಳು, ಪೈಲೆಟ್ಗಳ ಬಳಕೆಗಾಗಿಯೇ ಕನ್ನಡಿಗರು ತಯಾರು ಮಾಡಿರುವ ಅಡ್ವಾನ್ಸ್ಡ್ ಹೆಲ್ಮೆಟ್ ಗಮನ ಸೆಳೆಯುತ್ತಿದೆ.
ವರ್ಚಸ್ ಏರೋ ಸ್ಪೇಸ್ ಸಂಸ್ಥೆ ಸುಮಾರು 8 ರಿಂದ 10 ಕೋಟಿ ವೆಚ್ಚದ, ಒಂದು ಕೆ.ಜಿ. ತೂಕದ ಅಡ್ವಾನ್ಸ್ಡ್ ಹೆಲ್ಮೆಟ್ ಇದಾಗಿದೆ.
ಸೆನ್ಸಾರ್ ಮೂಲಕ ಫೈಟರ್ ಜೆಟ್ ಮೇಲಿರುವ ಪೈಲೆಟ್ಗೆ ಸುತ್ತಲಿನ ಪ್ರದೇಶದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತದೆ. ಜೊತೆಗೆ, ಕಣ್ಣಂಚಿನಲ್ಲೇ ಎಲ್ಲವು ತಿಳಿಯುವಂತೆ ಅಭಿವೃದ್ಧಿ ಪಡಿಸಲಾಗಿದೆ.
ಭಾರತದ ವಾಯುಪಡೆಯಲ್ಲಿರುವ ತೇಜಸ್ ವಿಮಾನದ ಅಪ್ಗ್ರೇಡ್ ವರ್ಷನ್ಗೆ ಮತ್ತು ಬಹುನೀರಿಕ್ಷಿತ ಭಾರತ ವಾಯಸೇನೆಯ ಮುಂಬರುವ ಫೈಟರ್ ಜೆಟ್ ಅಮ್ಕಾಗೆ ಬಳಕೆ ಮಾಡಲು ತಯಾರಿ ಮಾಡಲಾಗಿದೆ.