ಮಲಯಾಳಂ ಸೂಪರ್‌ ಸ್ಟಾರ್ ಮೋಹನ್ ಲಾಲ್ ಹಾಗೂ ಖ್ಯಾತ ನಿರ್ದೇಶಕ ಜೀತು ಜೋಸೆಫ್, ಬ್ಲಾಕ್‌ಬಸ್ಟರ್ ಕ್ರೈಮ್ ಥ್ರಿಲ್ಲರ್‌ ಸಿನಿಮಾದ 3ನೇ ಭಾಗಕ್ಕೆ ಕೈಜೋಡಿಸಿದ್ದಾರೆ.

ದೃಶ್ಯಂ 3 ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಫೆಬ್ರವರಿ 20 ರಂದು ನಿರ್ದೇಶಕ ಜೀತು ಜೋಸೆಫ್ ಮತ್ತು ನಿರ್ಮಾಪಕ ಆಂಥೋನಿ ಪೆರುಂಬವೂರ್ ಅವರೊಂದಿಗೆ ಫೋಟೋ ಹಂಚಿಕೊಳ್ಳುವ ಮೂಲಕ ಮೋಹನ್ ಲಾಲ್ ತಮ್ಮ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಈ ಫೋಟೋವನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ನಟ ಮೋಹನ್ ಲಾಲ್, ʻಪಾಸ್ಟ್​ ಎಂದಿಗೂ ಮೌನವಾಗಿರುವುದಿಲ್ಲ. ದೃಶ್ಯಂ 3 ಕನ್ಫರ್ಮ್‌ʼ ಎಂಬ ಕ್ಯಾಪ್ಷನ್​​ ಕೊಟ್ಟಿದ್ದಾರೆ. ಈ ಪೋಸ್ಟ್ ಹಂಚಿಕೊಂಡ ಕೂಡಲೇ ಅಭಿಮಾನಿಗಳು ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಶುರು ಮಾಡಿದ್ದಾರೆ. ʻವಾಹ್, ಬಿಗ್ಗೆಸ್ಟ್​ ಬ್ರ್ಯಾಂಡ್ ಸೀಕ್ವೆಲ್ ಈಸ್​ ಬ್ಯಾಕ್​​ʼ ಎಂದು ಬರೆದುಕೊಂಡಿದ್ದಾರೆ.

ಮಲಯಾಳಂ ಭಾಷೆಯಲ್ಲಿ ತೆರೆ ಕಂಡು ದೇಶಾದ್ಯಂತ ಸಂಚಲನ ಮೂಡಿಸಿದ್ದ ದೃಶ್ಯಂ 1, 2 ಸಿನಿಮಾ ಬೇರೆ ಭಾಷೆಗಳಿಗೂ ರಿಮೇಕ್‌ ಆಗಿತ್ತು. ಇದೀಗ ಭಾಗ-2 ಯಶಸ್ಸಿನ ಬೆನ್ನಲ್ಲೇ 3ನೇ ಭಾಗವನ್ನು ಬೆಳ್ಳಿ ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.

Leave a Reply

Your email address will not be published. Required fields are marked *