ಕೋಲಾರ : ಮೊಬೈಲ್ನಲ್ಲಿ ರೀಲ್ಸ್ ನೋಡುತ್ತಲೇ ಚಾಲಕ ಸರ್ಕಾರಿ ಬಸ್ ಚಲಾಯಿಸಿದ ಘಟನೆ ಕೋಲಾರದಲ್ಲಿ ಇಂದು ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗಿದೆ.
ಸರ್ಕಾರಿ ಬಸ್ ಚಾಲಕ ಹತ್ತಾರು ಪ್ರಯಾಣಿಕರ ಜೀವ ಕೈಯಲ್ಲಿಟ್ಟುಕೊಂಡು ಮೊಬೈಲ್ನಲ್ಲಿ ರೀಲ್ಸ್ ನೋಡುತ್ತಾ ಬಸ್ ಚಲಾಯಿಸಿದ್ದಾನೆ. ತನ್ನ ಕೈಯಲ್ಲಿ ಪ್ರಯಾಣಿಕರ ಜೀವವಿದೆ ಎಂಬುದನ್ನು ಮರೆತು ಮೊಬೈಲ್ನಲ್ಲಿ ಮುಳುಗಿದ್ದನು. ಬಸ್ ಚಾಲಕನ ನಿರ್ಲಕ್ಷ್ಯದಿಂದ ಪ್ರಯಾಣಿಕರು ರೋಸಿ ಹೋಗಿದ್ದಾರೆ. ಈ ಹಿನ್ನೆಲೆ ಪ್ರಯಾಣಿಕರೊಬ್ಬರು ಚಾಲಕನ ನಿರ್ಲಕ್ಷ್ಯವನ್ನು ಮೊಬೈಲ್ನಲ್ಲಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಕೋಲಾರದಿಂದ ಪಾವಗಡ ಮಾರ್ಗದ ಬಸ್ ಚಾಲಕ ಈ ರೀತಿಯ ನಿರ್ಲಕ್ಷ್ಯ ತೋರಿದ್ದಾನೆ. ಇನ್ನು ಚಾಲಕನ ನಿರ್ಲಕ್ಷ್ಯದ ವಿರುದ್ಧ ಪ್ರಯಾಣಿಕರು ಕ್ರಮಕ್ಕೆ ಆಗ್ರಹಿಸಿದ್ದಾರೆ ಎಂದು ಹೇಳಲಾಗಿದೆ.