ಮಾನ್ವಿಯಲ್ಲಿ ಈ ಹಿಂದಿನ ಇತಿಹಾಸವನ್ನು ನಾವು ನೋಡಿದಾಗ ಗಣೇಶ ಚತುರ್ಥಿಯಂದು ಗಲಾಟೆಯಾದ ವಿಷಯವೇ ಇಲ್ಲ,ಯಾಕಂದರೆ ನಾವೆಲ್ಲರೂ ಸೇರಿ ಹಬ್ಬ ಆಚರಿಸೋಣ ಎಂದು ಮುಸ್ಲಿಂ ಸಮಾಜದ ಧರ್ಮಗುರು ಸಜ್ಜಾದ್ ಹುಸೇನ್ ಮತವಾಲೆ ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜರುಗಿದ ಗಣೇಶ ಹಾಗು ಈದ್ ಮಿಲಾದ್ ಸಭೆಯಲ್ಲಿ ಮಾತನಾಡಿ, ಮಾನ್ವಿ ಅಂದರೆ ಶಾಂತೀಯ ಊರು ಇದ್ದಂಗೆ ಇಲ್ಲಿ ಯಾರು ಸಹ ಜಗಳವಾಡುವ ಪದ್ಧತಿ ಇಲ್ಲ ಯಾರಾದರು ಹಿರಿಯರು ಹೇಳಿದರೆ ಸಾಕು ಸೌಹಾರ್ದತೆಯಿಂದ ಬದುಕುವ ವಿಚಾರ ಇದೆ ಎಂದು ಬಣ್ಣಿಸಿದರು.
ಉಪ್ಪಳಮಠ ವಕೀಲ ಮಾತನಾಡಿ, ನಾವು ಕಳೆದ 50 ವರ್ಷದಿಂದ ಗಣೇಶ ಹಬ್ಬವನ್ನು ಆಚರಿಸುವ ಮಾನ್ವಿ ಪೊಲೀಸ್ ಠಾಣೆಗೆ ಸಭೆಗೆ ಆಗಮಿಸುತ್ತಿದ್ದೇವೆ.ಆದರೆ ಮಾನ್ವಿಯಲ್ಲಿ ಹಿಂದೂ ಮುಸ್ಲಿಂ ಸಮಾಜದ ನಡುವೆ ಗಲಾಟೆಯಾದ ಇತಿಹಾಸ ಇಲ್ಲ,ಯಾಕಂದರೆ ಸಹೋದರರಂತೆ ಬದುಕಿದ್ದರಿಂದ ಈ ಮಾತು ಹೇಳುತ್ತಿದ್ದೇನೆ ಎಂದರು.
ನಿಯಮಗಳನ್ನು ಪಾಲಿಸುವಂತೆ ಪಿಐ ವೀರಭದ್ರಯ್ಯ ಹಿರೇಮಠ