ಬೇಕಾಗುವ ಪದಾರ್ಥಗಳು:-
1/2 ಕಪ್ ನೀರು
1 ಚಮಚ ಟೀ ಪುಡಿ
1 ಏಲಕ್ಕಿ
2 ಕಿತ್ತಳೆ ಹಣ್ಣು
1/2 ನಿಂಬೆಹಣ್ಣು
1 ಚಮಚಶುಂಠಿ ರಸ
6ಪುದೀನ ಎಲೆಗಳು
1 ಚಮಚ ಹನಿ
ಮಾಡುವ ವಿಧಾನ:-
ನೀರಿಗೆ ಟೀ ಪುಡಿ ಮತ್ತು ರುಬ್ಬಿದ ಏಲಕ್ಕಿ ಸೇರಿಸಿ ಚೆನ್ನಾಗಿ ಕುದಿಯಲು ಬಿಡಿ.
ನಂತರ ಒಂದು ಟಂಬ್ಲರ್ನಲ್ಲಿ ಶುಂಠಿ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಅದಕ್ಕೆ ಕತ್ತರಿಸಿದ ನಿಂಬೆ ತುಂಡು ಮತ್ತು ಪುದೀನ ಎಲೆಗಳನ್ನು ಸೇರಿಸಿ ನಂತರ ಐಸ್ ಕ್ಯೂಬ್ ಮತ್ತು ಕಿತ್ತಳೆ ಹಣ್ಣನ್ನು ಹಿಂಡಿ ಮತ್ತು ಅದಕ್ಕೆ ನಿಂಬೆ ರಸವನ್ನು ಸೇರಿಸಿ ನಂತರ ಶೀತಲವಾಗಿರುವ ಟೀ ಡಿಕಾಕ್ಷನ್ ಸೇರಿಸಿ ಮತ್ತು ಸವಿಯಿರಿ.