ಚಾಮರಾಜನಗರ: ಮಾಜಿ ಶಿಕ್ಷಣ ಸಚಿವ , ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್ ಮಹೇಶ್ ಮನೆಯಲ್ಲಿ ಕಳ್ಳತನವಾಗಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಆದರ್ಶ ಬಡಾವಣೆಯಲ್ಲಿ ಮಾಜಿ ಶಿಕ್ಷಣ ಸಚಿವ ಎನ್ ಮಹೇಶ್ ರವರ ನಿವಾವಿದ್ದು, ನೆನ್ನೆ ಸಂಜೆ ತನಕ ಮನೆಯಲ್ಲಿದ್ದ ಎನ್ ಮಹೇಶ್ ರವರು ಬೆಂಗಳೂರಿಗೆ ತೆರಳಿದರು.
ಹೊಂಚು ಹಾಕುತ್ತಿದ್ದ ಖರ್ತನಾಕ್ ಕಳ್ಳರು ರಾತ್ರಿ ವೇಳೆ ಕಳ್ಳತನ ಮಾಡುವ ಮೊದಲು ಅಕ್ಕಪಕ್ಕದ ಮನೆಗೂ ಬೀಗ ಹಾಕಿದ ಬಳಿಕ ಕಳ್ಳತನ ಮಾಡಿದ್ದಾರೆ.
ಇದು ಬೆಳಗ್ಗೆ ಬಹಿರಂಗವಾಗಿದ್ದು, ನೆರೆ ಮೆನೆಯವರು ತಮ್ಮ ಮನೆಯಬಾಗಿಲಿಗೆ ಲಾಕ್ ಮಾಡಿದ್ದನ್ನು ಗಮನಿಸಿ ದಾರಿಯಲ್ಲಿ ಹೋಗುವವರ ಮೂಲಕ ತೆಗೆಯಿಸಿ ಹೊರ ಬಂದ ಬಳಿಕ ಎನ್ ಮಹೇಶ್ ರವರ ಮನೆ ಕನ್ನ ಹಾಕಿರುವುದು ಬೆಳಕಿಗೆ ಬಂತು.
ಸ್ಥಳಕ್ಕೆ ಕೊಳ್ಳೇಗಾಲ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಮನೆಯಲ್ಲಿ ಏನು ಕಳುವಾಗಿದೆ ಎಂದು ತಿಳಿದು ಬಂದಿಲ್ಲವಾದರೂ ಮಹೇಶ್ ರವರು ಬರುವ ತನಕ ಕಳ್ಳತನವಾಗಿರುವ ವಸ್ತುಗಳ ಮಾಹಿತಿ ದೊರೆತ ಬಳಿಕ ಪೊಲೀಸರು ತನಿಖೆ ಕೈಗೊಳ್ಳಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.