ಹುಬ್ಬಳ್ಳಿ: ಆತ ಮೂರು ಮಕ್ಕಳ ತಂದೆ ಗಾರೆಕೆಲಸವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ನಿನ್ನೆ ರಾತ್ರಿ ಕುಟುಂಬದವರ ಜೊತೆ ಕಾಲ ಕಳೆದಿದ್ದ ಆತ ಬೆಳಗಾಗುವುದರೊಳಗೆ ಕತ್ತು ಕುಯ್ದ ರೀತಿಯಲ್ಲಿ ಆತನ
ಶವ ಪತ್ತೆಯಾಗಿದೆ.
ಹೀಗೆ ಫೋಟೋದಲ್ಲಿ ಕಾಣುತ್ತಿರೋ ವ್ಯಕ್ತಿಯ ಹೆಸರು ಹುಲ್ಲೇಶ್ ಹಾಲರವಿ. 38 ವರ್ಷದ ಈತ ಗಿರಣಿಚಾಳದ ನಿವಾಸಿ. ಆದ್ರೆ ಮದುವೆಯಾದ ನಂತರ ತನ್ನ ಮೂರು ಮಕ್ಕಳ ಜೊತೆ ತಾರಿಹಾಳದಲ್ಲಿ ಮನೆಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆದ್ರೆ ಕಳೆದ ಮೂರು ದಿನಗಳಿಂದ ಗಿರಣಿಚಾಳದಲ್ಲಿನ ತನ್ನ ತಾಯಿಯ ಮನೆಗೆ ಬಂದಿದ್ದ ಈತ ಏರಿಯಾದಲ್ಲಿ ಜಾತ್ರೆ ಮಾಡಿದ್ದ. ಎಲ್ಲರ ಜೊತೆ ಖುಷಿಯಾಗಿದ್ದ. ಜಾತ್ರೆ ಮಾಡಿದವ ಬೆಳಗಾಗುವುದರಲ್ಲಿ ಆಗುವುದರೊಳಗೆ ಹೆಣವಾಗಿ ಪತ್ತೆಯಾಗಿದ್ದಾನೆ.
ಇನ್ನು ಕೊಲೆಯಾದ ಹುಲ್ಲೇಶ್ ಯಾರ ಜೊತೆಯು ಜಗಳವನ್ನು ಮಾಡಿಕೊಂಡವನಲ್ಲ ಯಾರ ತಂಟೆಗೂ ಕೂಡ ಹೋದವನಲ್ಲ. ಬೆಳ್ಳಿ ಬಂಗಾರ ಮಾಡಿಕೊಂಡವನಲ್ಲ ಸ್ವಲ್ಪ ಸಾರಾಯಿ ಕುಡಿಯುವ ಚಟವಿತ್ತು. ಅದನ್ನು ಕೂಡಾ 1 ತಿಂಗಳ ಹಿಂದೆ ಬಿಟ್ಟಿದ್ದ. ಆದ್ರೆ ಆತನನ್ನು ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ರು ನನಗೆ ಗೊತ್ತಾಗುತ್ತಿಲ್ಲ ಅಂತಾ ಹುಲ್ಲೇಶ್ ತಾಯಿ ತನ್ನ ಅಳಲನ್ನು ತೋಡಿಕೊಂಡಿದ್ದು ಹೀಗೆ.
ಕೊಲೆಯಾದ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ
ಉಪನಗರ ಠಾಣೆಯ ಪೊಲೀಸರು ಭೇಟಿಯನ್ನು ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತಪಟ್ಟ ಹುಲ್ಲೇಶ್‌ನ ಕುತ್ತಿಗೆಗೆ ಹರಿತವಾದ ವಸ್ತುವಿನಿಂದ ಹರಿದಿರುವ ಗಾಯ ಕಂಡು ಬಂದಿದೆ ಹೀಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಕೂಡಾ ಎಲ್ಲಾ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ.
ಜೊತೆಗೆ ಎಲ್ಲ ಆಯಾಮಗಳಿಂದ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಕಮಿಷನರ್ ಎನ್ ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೂ ಹುಲ್ಲೇಶ್ ತಾಯಿಗೆ ಧೈರ್ಯ ತುಂಬಿದ್ದಾರೆ.
ಒಟ್ಟಿನಲ್ಲಿ ಅಮಾವಾಸ್ಯೆ ದಿನವೇ ಗಣಪತಿ ವಿಸರ್ಜನೆ ಮಾಡುವ ಬಾವಿಯಲ್ಲಿ ಕೊಲೆಯಾದ ಹುಲ್ಲೇಶ್‌ನ ಶವ ಕಂಡು ಸುತ್ತಮುತ್ತಲಿನ ಸಾರ್ವಜನಿಕರು ಆತಂಕಕ್ಕೊಳಗಾಗದ್ದಾರೆ.
ಸದ್ಯ ಹುಲ್ಲೇಶ್ ಸಾವಿಗೆ ಕಾರಣವೇನು ಎಂಬ ಮಾಹಿತಿ ಇದೀಗ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.