ಅಮರಾವತಿ : ಹೈದರಾಬಾದ್‌ನ ಮದೀನಾ ವೃತ್ತದಲ್ಲಿರುವ ಅಬ್ಬಾಸ್ ಟವರ್ಸ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 40 ಮಳಿಗೆಗಳು ಹಾನಿಗೊಳಗಾಗಿವೆ. ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಅವಘಡ ಕುರಿತು ತೆಲಂಗಾಣ ಅಗ್ನಿಶಾಮಕ, ವಿಪತ್ತು ಪ್ರತಿಕ್ರಿಯೆ, ತುರ್ತು ಮತ್ತು ನಾಗರಿಕ ರಕ್ಷಣಾ ಇಲಾಖೆಯ ಹೆಚ್ಚುವರಿ ನಿರ್ದೇಶಕ ಜಿ.ವಿ. ನಾರಾಯಣ ರಾವ್ ಮಾತನಾಡಿದರು. ಈ ಕುರಿತು ಮಾಹಿತಿ ತಿಳಿದು ಬಂದಿದ್ದು, ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳನ್ನು ಕಳುಹಿಸಲಾಗಿದೆ ಎಂದರು.
ಟವರ್ಸ್‌ನಲ್ಲಿ ಒಟ್ಟು 300 ಜವಳಿ ಉದ್ಯಮ ಹಾಗೂ ಬಟ್ಟೆ ಅಂಗಡಿಗಳಿದ್ದು, ಅಗ್ನಿ ಅವಘಡದಿಂದಾಗಿ ಸುಮಾರು 40 ಅಂಗಡಿಗಳು ಹಾನಿಗೊಳಗಾಗಿವೆ. ಇನ್ನೂ ಕಟ್ಟಡದಲ್ಲಿ ವಾಸಿಸುತ್ತಿದ್ದ ಭದ್ರತಾ ಸಿಬ್ಬಂದಿಯ ಕುಟುಂಬಸ್ಥರು ಹಾಗೂ ಟವರ್ಸ್ ಸಮೀಪದಲ್ಲಿ ವಾಸಿಸುತ್ತಿದ್ದವ ಪೈಕಿ ಒಟ್ಟು 12 ಜನರನ್ನು ರಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.