ಹುಬ್ಬಳ್ಳಿ: ಭಾರತೀಯ ಪರಂಪರೆಯಲ್ಲಿ ಗಣೇಶೋತ್ಸವ ಅಂದರೆ ನಿಜಕ್ಕೂ ಅದೊಂದು ಮಹತ್ವದ ಹಬ್ಬವಾಗಿದೆ. ಈ ನಿಟ್ಟಿನಲ್ಲಿ ವಿದೇಶದಲ್ಲಿಯೂ ಕೂಡ ಹುಬ್ಬಳ್ಳಿಯ ದಂಪತಿ ಮನೆಯಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುವ ಭಾರತೀಯ ಸಂಸ್ಕೃತಿಯನ್ನು ವಿದೇಶದಲ್ಲಿಯೂ ಪಸರಿಸುವಂತೆ ಮಾಡಿದ್ದಾರೆ.
ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಮಣಕವಾಡದ ಶಶಿ ಚಾಕಲಬ್ಬಿ, ಸಾನ್ವಿ ಚಾಕಲಬ್ಬಿ ಎಂಬುವವರೇ ಅಮೇರಿಕಾದ ಸ್ಯಾನ್-ಡಿಯಾಗೋ ನಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುವ ಮೂಲಕ ಮಹತ್ವದ ಸಂದೇಶವನ್ನು ಸಾರಿದ್ದಾರೆ. ಈ ಹಿಂದೆಯೂ ಕೂಡ ಈ ದಂಪತಿ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಮನೆಯಲ್ಲಿಯೇ ರಾಮಮಂದಿರ ನಿರ್ಮಾಣ ಮಾಡಿ ಪೂಜೆ ಕೂಡ ಮಾಡಿದ್ದರು.
ಈ ಬಾರಿ ಗಣೇಶೋತ್ಸವಕ್ಕೆ ಗಣಪತಿ ಪ್ರತಿಷ್ಠಾಪನೆ ಮಾಡಿ ವಿಶೇಷವಾಗಿ ಪೂಜೆ ಸಲ್ಲಿಸಿ ನೆರೆ ಹೊರೆಯವರಿಗೆ ಪ್ರಸಾದ ವಿತರಣೆ ಮಾಡಿ ಸಂಭ್ರಮಿಸಿದ್ದಾರೆ.
ಇನ್ನೂ ಅನಿವಾಸಿ ಭಾರತೀಯರಲ್ಲಿ ಇಂದಿಗೂ ಕೂಡ ಭಾರತೀಯ ಸಂಪ್ರದಾಯಗಳು ಉಳಿದು ಬೆಳೆಯುತ್ತಿರುವುದು ನಿಜಕ್ಕೂ ವಿಶೇಷವಾಗಿದೆ. ಅಲ್ಲದೆ ದೂರ ದೇಶದಲ್ಲಿದ್ದರೂ ಆಚರಣೆಗಳನ್ನು ದೂರ ಮಾಡದೇ ಇರುವ ದಂಪತಿ ಕಾರ್ಯ ನಿಜಕ್ಕೂ ಪ್ರಶಂಸೆಗೆ ಪಾತ್ರವಾಗಿದೆ.