ಉಡುಪಿ : ಗೋವಾ ಸಿಎಂ ಪ್ರಮೋದ್ ಸಾವಂತ್ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ.
ಒಂದು ದಿನ ಉಡುಪಿ ಪ್ರವಾಸವನ್ನು ಕೈಗೊಂಡಿದ್ದ ಗೋವಾ ಸಿಎಂ, ಹೆಲಿಕಾಫ್ಟರ್ ವಿಮಾನವನ್ನು ಬಿಟ್ಟು ಸರಳವಾಗಿ ರೈಲಿನ ಮೂಲಕ ಬೈಂದೂರು ರೈಲ್ವೆ ನಿಲ್ದಾಣಕ್ಕೆ ಬಂದಿಳಿದರು. ಸಾವಂತ್ ಅವರನ್ನು ಶಾಸಕ ಗುರುರಾಜ್ ಗಂಟಿಹೊಳೆ ಬರಮಾಡಿಕೊಂಡರು.
ಸ್ವಲ್ಪ ಕಾಲ ವಿಶ್ರಾಂತಿ ಪಡೆದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ಮೂಕಾಂಬಿಕೆಯ ದರ್ಶನಗೈದರು. ಈ ಬಳಿಕ ಚಂಡಿಕಾ ಹೋಮದಲ್ಲಿ ಭಾಗಿಯಾದರು. ವಿಶೇಷ ಪೂಜೆ ನೆರವೇರಿಸಿ ಇತರೆ ಎರಡು ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗೋವಾಕ್ಕೆ ವಾಪಸ್ ಆಗಿದ್ದಾರೆ.