ಮನಸ್ಸು ಭಾರವಾಗಿದೆ , ಕಣ್ಣು ತುಂಬಿದೆ ಕೇರಳದ ವಯನಾಡಿನ ಭೂಕುಸಿತ ನೋಡುಗರನ್ನು ಒಂದು ಕ್ಷಣ ದಿಗ್ಭ್ರಾಂತರನ್ನಾಗಿಸಿತು. ಅದೊಂದು ಸುಂದರ ತಾಣ ಸುತ್ತಲು ಹಸಿರು ಪ್ರಕೃತಿ ಎಂಬ ಸೌಂದರ್ಯ ದೇವತೆ ಮೈತುಂಬಾ ಹಸಿರು ಸೀರೆಯನ್ನುಟ್ಟುಕೊಂಡು ಮಧುಮಗಳಂತೆ ಕಂಗೊಳಿಸುವ ಜೊತೆಗೆ ಝುಳುಝುಳು ಹರಿಯುವ ಜಲಪಾತವು ಹಸಿರು ದೇವತೆಯ ಮುಡಿಯಲ್ಲಿರುವ ಮಲ್ಲಿಗೆ ಹೂಗಂತೆ ಮಿನುಗುತ್ತಿತ್ತು ಈ ಮುದ್ದಾದ ಪ್ರಕೃತಿ ಮಧುಮಗಳಿಗೆ ಸಂಬಂಧಗಳಂತೆ ಇದ್ದದ್ದು ಶಾಂತವಾಗಿ ಬೀಸುವ ಗಾಳಿ ,ಪಕ್ಷಿಯ ಕಲರವ , ಮಕ್ಕಳಂತೆ ಹಸಿರು ವೃಕ್ಷಕ್ಕೆ ಹೊಂದಿಕೊಂಡಿದ್ದ ಹಾಗೂ ಆಶ್ರಯ ಪಡೆಯುತ್ತಿದ್ದ ಪ್ರಾಣಿಗಳು ಕೆರೆ ..ನದಿ..ಜಲಪಾತಗಳಂತಹ ಮಡಿಲ ಭೂಮಿಗೆ ತಾಯಿಯ ಒಡಲಲ್ಲಿ ಮಿಂದೆಳುತ್ತಾ ಮುತ್ತಿಡುವಂತೆ ಇದ್ದದ್ದು ಜಲಚರಗಳು ಇವೆಲ್ಲದರ ಜೊತೆಗೆ ರಕ್ತ ಸಂಬಂಧಿಗಳಂತೆ ಬದುಕುತ್ತಿದ್ದವ್ರು ಅಲ್ಲಿನ ಜೀವರಾಶಿಗಳಾದ ಮನುಕುಲದವರು ಈ ಸುಂದರ ರಮಣೀಯ ಪ್ರಕೃತಿಯು ಅಲ್ಲಿನ ಮನುಷ್ಯ ಜೀವಗಳನ್ನು ತನ್ನ ಎದೆಗೆ ಅಪ್ಪಿಕೊಂಡು ಆಸರೆಯಾಗಿತ್ತು ಇಷ್ಟು ಸುಂದರವಾದ ಪ್ರಪಂಚಕ್ಕೆ ಅಲ್ಲಿನ ನೆಮ್ಮದಿಯ ಸೂರಿನ ಮೇಲೆ ಯಾರ ಕಣ್ಣು ಬಿತ್ತೋ ಅಯ್ಯೋ …..ದೇವ್ರೆ!!???…
ಅದೊಂದು ದಿನ ರಾತ್ರಿ ಕರಾಳವಾದ ಮರೆಯಲಾಗದ …ಅಲಿಸಲಾಗದ…ಮರುಸೃಷ್ಠಿಸಲಾಗದ ಘಟನೆ ಜರುಗಿಯೇ ಹೋಯ್ತು ಪ್ರಕೃತಿದೇವಿ ಅದೇಕೋ ಕಾಣೆ ಮುನಿಸಿಕೊಂಡಳು ..ಅಂದಿನ ದಿನ ರಾತ್ರಿ ಮುಗ್ಧ ಜೀವಗಳು ಊಟ ಮುಗಿಸಿ ತಮ್ಮ ತಮ್ಮ ಕುಟುಂಬದ ಜೊತೆಗೆ ನಾಳೆಯ ದಿನ ಏನು ಎಂಬುದೆ ಅರಿಯದೇ ..ತಮ್ಮ ಮಕ್ಕಳ ಮುಂದಿನ ಭವಿಷ್ಯವೇನು ಎಂಬ ನೂರಾರು ಕನಸುಗಳನ್ನು ಹೊತ್ತು ನಿದ್ರಿಸುತ್ತಿದ್ದರು ಅದೇ ಅದೇ ಅವ್ರ ಜೀವನದ ಕೊನೆಯ ನಿದ್ರೆಯಾಗಿತ್ತು ಯಾಕೆ ? ಹೌದು ಆದಿನ ಬೆಳಗಿನ ಜಾವ ಸರಿಸುಮಾರು 3ಗಂಟೆ 5ನಿಮಿಷಕ್ಕೆ ಸರಿಯಾಗಿ ಏಕೋ ಕಾಣೆ ಪ್ರಕೃತಿ ದೇವತೆ ಮುನಿಸಿಕೊಂಡಿದ್ದಳು ..ತನ್ನ ಎದೆಗಪ್ಪಿಕೊಂಡಿದ್ದ ಮನುಕುಲದ ಮೇಲೆ ಕೋಪಗೊಂಡಳು ಅವಳ ಕೋಪಕ್ಕೆ ನೋಡು ನೋಡುತ್ತಿದ್ದಂತೆ ನಿದ್ರಿಸುತ್ತಿದ್ದ ಮುಗ್ಧ ಜೀವಗಳು ಚಿರನಿದ್ರೆಗೆ ಜಾರಿದರು ..ಮಕ್ಕಳೆಲ್ಲೋ…ತಂದೆ ತಾಯಿಯಲ್ಲೋ ..ಕಂಡಿದ್ದ ಕನಸುಗಳೆಲ್ಲೋ ಪಾಪ ಅಂದದ ಮೊಗವು ಕರಗಿರು ಕೆಸರಲ್ಲಿ ಚೆಂದದ ಚೆಲುವು ಚೆಲ್ಲಿತು ರಕ್ತವಾಗಿ ..ದೇಹದ ಅಂಗಾಂಗಗಳೇ ಆದವು ಚೆಲ್ಲಾಪಿಲ್ಲಿ ಒಂದು ಕ್ಷಣಕ್ಕೆ ಕೆಸರಿನ ಮಣ್ಣಲ್ಲಿ ಮಣ್ಣಾದವು ಜೀವಗಳು ..ಈ ರೀತಿಯ ಸಾವು ಬರಬಹುದು ಎಂಬ ಅರಿವೇ ಇಲ್ಲದ ಈ ಜೀವಗಳು ಆ ದಿನ ಅನುವಿಸಿದ ನೋವೇನೋ ..ಅಳಲೇನೊ ..ಬಾಧೆಯೇನೋ ಒಮ್ಮೆ ಕಣ್ಣುಮುಚ್ಚಿ ನೆನೆದಿಕೋ ಅವರ ಮನದ ಕೂಗು ಆ ದಿನ ಪ್ರಕೃತಿದೇವತೆಯೇ ಕೊನೆಯುಸಿರೆಳೆದಿದ್ದಳು,
(ಶಶಿಕಲ ಗೌಡ…..🖋)
ಕಂಡ ಕನಸು ಚೂರಾಯ್ತು , ನಗು ಸತ್ತೋಯ್ತು , ಆಕ್ರಂದನ ಮುಗಿಲು ಮುಟ್ಟಿತು ಸೂರೆ ಸಾವಿನ ಸೆರೆಯಾಯ್ತು….