ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ ಅವರು ಶಸ್ತ್ರಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ. ಕ್ಯಾನ್ಸರ್ ಗೆದ್ದಿರುವ ಶಿವಣ್ಣ ಅಭಿಮಾನಿಗಳಿಗೆ ಹೊಸ ವರ್ಷದಂದು ದರ್ಶನ ಕೊಟ್ಟಿದ್ದಾರೆ. ಜೊತೆಗೆ ಕ್ಯಾನ್ಸರ್‌ನಿಂದ ಮುಕ್ತರಾಗಿರುವ ಕುರಿತು ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ.
ಅಮೆರಿಕದಿಂದಲೇ ಅಭಿಮಾನಿಗಳಿಗೆ ಸಂದೇಶವೊಂದನ್ನು ಶಿವಣ್ಣ ದಂಪತಿ ರವಾನಿಸಿದ್ದಾರೆ. ಗೀತಾ ಶಿವರಾಜ್‌ಕುಮಾರ್ ಮಾತನಾಡಿ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ನೀವೆಲ್ಲರೂ ಮಾಡಿದ ಪ್ರಾರ್ಥನೆಯಿಂದ ಶಿವರಾಜ್‌ಕುಮಾರ್ ಎಲ್ಲಾ ರಿಪೋರ್ಟ್ ನೆಗೆಟಿವ್ ಬಂತು. ಅವರೀಗ ಕ್ಯಾನ್ಸರ್ ಫ್ರೀ ಅಂತ ವೈದ್ಯರು ಅಫಿಷಿಯಲಿ ಹೇಳಿದ್ದಾರೆ. ನಿಮ್ಮೆಲ್ಲರ ಹಾರೈಕೆಯಿಂದ ಅವರು ಗುಣಮುಖರಾಗಿದ್ದಾರೆ. ಇದನ್ನೂ ನಾನು ಎಂದಿಗೂ ಮರೆಯೋದಿಲ್ಲ ಎಂದಿದ್ದಾರೆ.
ಶಿವಣ್ಣ ಮಾತನಾಡಿ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಭಯ ಆಗುತ್ತೆ ಮಾತನಾಡಬೇಕಾದರೆ, ಎಲ್ಲಿ ಎಮೋಷನಲ್ ಆಗಿ ಬಿಡ್ತೀನಿ ಅಂತ. ಇಲ್ಲಿಂದ ಹೋಗುವಾಗ ಎಮೋಷನಲ್ ಆಗಿದ್ದೇ, ಭಯ ಅನ್ನೋದು ಇದ್ದೇ ಇರುತ್ತದೆ. ಆ ಭಯ ಕಮ್ಮಿ ಮಾಡೋಕೆ ಎಂದೇ ಅಭಿಮಾನಿ ದೇವರುಗಳಿದ್ದಾರೆ.
ವೈದ್ಯರು ನನ್ನ ನೋಡಿಕೊಂಡ ರೀತಿಯಿಂದ ಇನ್ನಷ್ಟು ಧೈರ್ಯ ಬಂತು. ’45’ ಚಿತ್ರದ ಶೂಟಿಂಗ್ ಮಾಡುವಾಗ ಕಿಮೋ ಥೆರಾಫಿಯಲ್ಲಿ ಕೆಲಸ ಮಾಡಿದ್ದೀನಿ. ಕ್ಲೈಮ್ಯಾಕ್ಸ್ ಫೈಟ್ ಎಲ್ಲಾ ಮಾಡಿದ್ದೇನೆ ಎಂದು ನಟ ಹಂಚಿಕೊಂಡರು. ಅಮೆರಿಕಗೆ ಚಿಕಿತ್ಸೆಗೆ ಹೊರಡುವ ಡೇಟ್ ಹತ್ತಿರ ಬಂದಾಗ ಸ್ವಲ್ಪ ಟೆನ್ಷನ್ ಜಾಸ್ತಿ ಆಯಿತು. ಆದರೆ ಸದಾ ಪತ್ನಿ ಗೀತಾ ಮತ್ತು ಮಗಳು ನಿವಿ ನನ್ನ ಜೊತೆ ಬೆಂಬಲವಾಗಿ ನಿಂತಿದ್ದಾರೆ.
ನನ್ನ ಚಿಕಿತ್ಸೆ ಮಾಡಿದ ವೈದ್ಯ ಮನೋಹರ್ ಅವರು ಮಗುವಿನಂತೆ ನನ್ನ ನೋಡಿಕೊಂಡರು. ಯೂರಿನರಿ ಬ್ಲಾಡ್ ತೆಗೆದು ಹೊಸದು ಬ್ಲಾಡ್ ಹಾಕಿದ್ದಾರೆ. ಯಾರು ಗಾಬರಿ ಆಗಬೇಡಿ ನಾನು ಆರಾಮ ಆಗಿದ್ದೇನೆ. ಐ ವಿಲ್ ಬಿ ಬ್ಯಾಕ್, ಡಬಲ್ ಪವರ್‌ನೊಂದಿಗೆ ಬರುತ್ತೇನೆ. ಎಲ್ಲಾ ನನ್ನ ಅಭಿಮಾನಿ ದೇವರುಗಳಿಗೂ ಧನ್ಯವಾದಗಳು ಎಂದು ಶಿವಣ್ಣ ಮಾತನಾಡಿದ್ದಾರೆ.