ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ನಡೆಯನ್ನು ಖಂಡಿಸಿ ಹಾಗೂ ಪ್ರಾಸುಕ್ಯೂಷನ್ ಹಿಂಪಡೆಯಲು ಆಗ್ರಹಿಸಿ, ತುಮಕೂರು ಜಿಲ್ಲೆಯ ಕೊರಟಗೆರೆ ಕೈ ಪಕ್ಷದ ಕಾರ್ಯಕರ್ತರು ಸೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮುಖಂಡರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಎಸ್ ಎಸ್ ಆರ್ ವೃತ್ತದಿಂದ ತಾಲ್ಲೂಕು ಕಛೇರಿಯ ವರೆಗೂ ಮೆರವಣಿಗೆ ಮೂಲಕ ಪ್ರತಿಭಟನೆ ಮಾಡಿದ ಬ್ಲಾಕ್ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಶ್ವಥ್ ನಾರಾಯಣ್ ಹಾಗೂ ಅರಕೆರೆ ಶಂಕರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರ ಸೇರಿ ರಾಜ್ಯದ ರಾಜ್ಯಪಾಲರ ವಿರುದ್ಧ ದಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು. ರಾಜ್ಯಪಾಲರು ಬಿಜೆಪಿ ಹೈಕಮಾಂಡ್ ಕೈಗೊಂಬೆಯಂತೆ ವರ್ತನೆ ಮಾಡುತ್ತಿದ್ದು, ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುವ ಮೂಲಕ ಭಾರತ ದೇಶದ ಅಖಂಡತೆಗೆ ಧಕ್ಕೆ ತರುತ್ತಿದ್ದಾರೆ. ಕೂಡಲೇ ರಾಷ್ಟ್ರಪತಿಗಳು ರಾಜ್ಯಪಾಲರನ್ನು ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಿ ಎಂ ಸಿದ್ದರಾಮಯ್ಯ ಅವರು ಬಡವರಿಗೆ ಮಹಿಳೆಯರ ಪರವಾಗಿ ಕೆಲಸ ಮಾಡುವವರು ಅವರು ಸಿದ್ದರಾಮಯ್ಯರಲ್ಲ ಶುದ್ದರಾಮಯ್ಯ ಪರಿಶುದ್ಧವಾಗಿದ್ದಾರೆ ಯಾವುದೇ ರೀತಿ ಹಗರಣ ಮಾಡಿಲ್ಲ ಯಡಿಯೂರಪ್ಪ ಕುಮಾರಸ್ವಾಮಿ ಜಿ ಟಿ ದೇವೇಗೌಡ ನಿಖಿಲ್ ಕುಮಾರಸ್ವಾಮಿ ಇವರೆಲ್ಲರೂ ಸಹ ಮೂಡದಲ್ಲಿ ನಿವೇಶನ ಹೊಂದಿರುವವರು ಹಾಗಾಗಿ ಅವರಪ್ರಾಸುಕ್ಯೂಷನ್ ಮೇಲೆಯೂ ಸಹ ಸಲ್ಲಿಸಿ ವಿಚಾರಣೆ ನಡೆಸಬೇಕು.
ಸಿದ್ದರಾಮಯ್ಯನವರ ತಂಟೆಗೆ ಹೋದರೆ ನಾವು ಸುಮ್ಮನೆ ಇರುವುದಿಲ್ಲ 20 ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿರುತ್ತದೆ ಇದನ್ನು ಅಳಗಾಡಿಸಲಾಗದೆ ಹೊಟ್ಟೆಕಿಚ್ಚಿನಿಂದ ಈ ರೀತಿಯ ಚಿಲ್ಲರೆ ರಾಜಕಾರಣ ಮಾಡುವುದು ಬಿಜೆಪಿ ಮತ್ತು ಜೆಡಿಎಸ್ ಗೆ ಶೋಭೆಯಲ್ಲ ಕೂಡಲೇ ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಂತೆ ವರ್ತಿಸುವುದನ್ನು ಬಿಟ್ಟು ಕಾನೂನು ರೀತಿಯಲ್ಲಿ ಪ್ರಾಶುಕ್ಯೂಷನ್ ಹಿಂಪಡೆಯಬೇಕು ಎಂದು ಆಗ್ರಹ ಮಾಡಿದರು
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ವಾಲೆ ಚಂದ್ರಯ್ಯ.ಬಲರಾಮಯ್ಯ ಲಕ್ಷ್ಮಮ್ಮ.ಜಯಮ್ಮ. ನಾಗರಾಜ್ (ಅಟ್ಟಿಕಾ ಬಾಬು) .
ಸೇರಿದಂತೆ ಹಲವರು ಉಪಸ್ಥಿತರಿದ್ದರು..