ಹುಬ್ಬಳ್ಳಿ ಧಾರವಾಡ ಕಮಿಷನರೇಟ್‌ನಿಂದ ಗಾಂಜಾ ವಿರುದ್ಧ ದಿಟ್ಟ ಹೆಜ್ಕೆ ಇಡಲಾಗುತ್ತಿದ್ದು, ಕಮಿಷನರೇಟ್ ವ್ಯಾಪ್ತಿಯ ಹಳೇ ಹುಬ್ಬಳ್ಳಿಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮತ್ತೆ 9 ಜನ ಗಾಂಜಾ ಮಾರಾಟಗಾರರ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೀರಜ್ ನ ಆಸ್ಪಕ ಮುಲ್ಲಾ, ತುಮಕೂರಿನ ಶಿವಕುಮಾರ್, ಹಳೇ ಹುಬ್ಬಳ್ಳಿಯ ಇಟ್ಬಾಲ್ ಅಹ್ಮದ್ ಮುದಗಲ್, ಆರೀಫ್ ಗಲಗಲಿ, ಅಭಿಷೇಕ ದೇವಮಾನೆ, ಅಮೃತ ಹವಳದ, ಮೊಹೃದರೆಹಾನ ಗೋಕಾಕ್, ಸಾಧೀಕ ಕಿತಾಬ್ ವಾಲೆ, ಮೆಹಬೂಬ್ ಸಾಬ್ ಮಕಂದಾರ ಎಂಬಾತರೇ ಬಂಧಿತರಾಗಿದ್ದಾರೆ.

ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆನಂದನಗರ ಕುಷ್ಠರೋಗ ಆಸ್ಪತ್ರೆಯ ಎದುರಿಗೆ ಇರುವ ಶೆಡ್ ಬಳಿ 9 ಜನ ಗಾಂಜಾ ಮಾರಾಟ ಮಾಡುತ್ತಿದ್ದರೆನ್ನಲಾಗಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಇನ್ನೂ ಬಂಧಿತರಿಂದ 1,25,000 ರೂ. ಮೌಲ್ಯದ 1500 ಗ್ರಾಂ ಗಾಂಜಾ, 60 ಸಾವಿರ ರೂ. ಮೌಲ್ಯದ ಮೊಬೈಲ್ ಪೋನ್ ಹಾಗೂ 2. ಸಾವಿರ ರೂ. ನಗದು ಸೇರಿ, ಒಟ್ಟು 1,87,000 ರೂ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಕುರಿತು ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *