ಕಾರವಾರ: ಹರ್ ಘರ್ ತಿರಂಗಾ ಅಭಿಯಾನ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಇಂದು ಬೆಳಗ್ಗೆ ಸರ್ಕಾರಿ ಸಿಬ್ಬಂದಿಗಳು ಕುಮಟಾ ನಗರದಲ್ಲಿ ಬೈಕ್ ರ್ಯಾಲಿ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಕಂದಾಯ ಇಲಾಖೆ,ಪೊಲೀಸ್ ಇಲಾಖೆ,ಅಗ್ನಿಶಾಮಕ ಇಲಾಖೆ, ಪುರಸಭೆ,ಆರೋಗ್ಯ ಇಲಾಖೆ ಯವರು ಬೈಕ್ ರ್ಯಾಲಿ ಯಲ್ಲಿ ಪಾಲ್ಗೊಂಡಿದ್ದರು.
ತಾಲೂಕು ಪಂಚಾಯಿತ ಕಾರ್ಯನಿರ್ವನಾಧಿಕಾರಿ ಆರ್ ಎಲ್ ಭಟ್ ಮಾತನಾಡಿ ಕೇಂದ್ರ ಸರ್ಕಾರ ದ ನಿರ್ದೇಶನದ ಮೇರೆಗೆ ಹರ್ ಘರ್ ತಿರಂಗ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು 14ನೇ ತಾರೀಖಿನವರೆಗೆ ನಡೆಯಲಿದೆ ಎಂದರು. ಮೆರವಣಿಗೆಯಲ್ಲಿ ಸಹಾಯಕ ಕಮಿಷನರ್ ಕಲ್ಯಾಣಿ ವೆಂಕಟೇಶ್ ಕಾಂಬಳೆ, ಕುಮಟಾ ಗ್ರೇಡ್ 2 ತಹಶೀಲ್ದಾರ್ ಸತೀಶ್ ಗೌಡ ಮುಂತಾದ ಅಧಿಕಾರಿಗಳು ಭಾಗವಹಿಸಿದ್ದರು.
ಕುಮಟಾ ಸಾಯಕ ಕಮಿಷನರ್ ಕಲ್ಯಾಣಿ ವೆಂಕಟೇಶ್ ಕಾಂಬಳೆ ಬೈಕ್ ರ್ಯಾಲಿಗೆ ಚಾಲನೆ ನೀಡಿದರು.
ಸುಬ್ರಮಣ್ಯ ಭಟ್ ಮದ್ಗುಣಿ ಕಾರವಾರ