ಭೋಪಾಲ್ : ಝಾನ್ಸಿಯಿಂದ ಪ್ರಯಾಗ್‌ರಾಜ್‌ಗೆ ಹೋಗುತ್ತಿದ್ದ, ಮಹಾಕುಂಭ ಮೇಳದ ವಿಶೇಷ ರೈಲಿಗೆ ಹತ್ತಲು ಹೋದಾಗ ಬಾಗಿಲು ಮುಚ್ಚಿದಕ್ಕೆ ಪ್ರಯಾಣಿಕರು ಆಕ್ರೋಶಗೊಂಡು ರೈಲಿಗೆ ಕಲ್ಲು ಎಸೆದಿರುವ ಘಟನೆ ಮಧ್ಯಪ್ರದೇಶದ ಹರ್ಪಾಲ್‌ಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ನಸುಕಿನ ಜಾವ 2 ಗಂಟೆಗೆ ರೈಲು ಹರ್ಪಾಲ್ ಪುರ ರೈಲ್ವೇ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ಜನರು ರೈಲಿನ ಮೇಲೆ ಕಲ್ಲು ಎಸೆದಿದ್ದಾರೆ ಎಂದು ಹರ್ಪಾಲ್ ಪುರ ಪೊಲೀಸ್ ಠಾಣೆಯ ಉಸ್ತುವಾರಿ ಪುಷ್ಪಕ್ ಶರ್ಮ ತಿಳಿಸಿದ್ದಾರೆ.

ಪ್ರಯಾಣಿಕರು ರೈಲಿಗೆ ಕಲ್ಲು ಎಸೆದಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಹರಿದಾಡುತ್ತಿದೆ. ಮಹಾ ಕುಂಭಮೇಳಕ್ಕೆ ಹೋಗುತ್ತಿದ್ದ ವಿಶೇಷ ರೈಲು ಝಾನ್ಸಿ ರೈಲ್ವೆ ನಿಲ್ದಾಣದಿಂದ ರಾತ್ರಿ 8 ಗಂಟೆಗೆ ಹೊರಟಿತ್ತು. ಹರ್ಪಾಲ್‌ಪುರ ನಿಲ್ದಾಣಕ್ಕೆ ಬರುತ್ತಿದ್ದಂತೆ ರೈಲಿನ ಬಾಗಿಲು ಹಾಕಿದ್ದರಿಂದ ಪ್ರಯಾಣಿಕರಿಗೆ ಹತ್ತಲು ಸಾಧ್ಯವಾಗಿರಲಿಲ್ಲ. ಇದರಿಂದ ಕೋಪಗೊಂಡ ಪ್ರಯಾಣಿಕರು ರೈಲಿಗೆ ಕಲ್ಲು ಎಸೆದಿದ್ದಾರೆ.

ಹರ್ಪಾಲ್‌ಪುರ ಮಹಾ ಕುಂಭಮೇಳಕ್ಕೆ ಹೋಗುವ ವಿಶೇಷ ರೈಲಿಗಾಗಿ ಪ್ರಯಾಣಿಕರು ಕಾಯುತ್ತಿದ್ದರು. ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಪ್ರಯಾಣಿಕರು ಹತ್ತಲು ಹೋದಾಗ ಬಾಗಿಲು ಲಾಕ್ ಆಗಿದೆ. ಇದರಿಂದ ಕೋಪಗೊಂಡ ಪ್ರಯಾಣಿಕರು ಬೋಗಿಗಳ ಮೇಲೆ ಹಾಗೂ ಬಾಗಿಲು, ಕಿಟಕಿಗಳ ಮೇಲೂ ಕಲ್ಲು ಎಸೆದಿದ್ದಾರೆ. ಇದರಿಂದ ರೈಲಿನೊಳಗಿದ್ದ ಪ್ರಯಾಣಿಕರು ಭಯಭೀತರಾಗಿ ಕಿರುಚಾಡಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *