ಸಿನಿಮಾ ನಟರಿಗೆ ನಟ್ಟು ಬೋಲ್ಟು ಟೈಟ್ ಮಾಡುವುದು ಗೊತ್ತಿದೆ ಎಂದು ಹೇಳಿಕೆ ನೀಡಿದ್ದ ಡಿಸಿಎಂ ಡಿಕೆಶಿ ಮಾತಿಗೆ ಹಿರಿಯ ನಟಿ ಹೇಮಾ ಚೌಧರಿ ಪ್ರತಿಕ್ರಿಯೆ ನೀಡಿದ್ದಾರೆ. ಡಿಕೆಶಿ ಅವರಿಗೆ ಜವಾಬ್ದಾರಿ ಇದೆ ಎಂದು ನಟಿ ಹೇಮಾ ಚೌಧರಿ ಅವರು ಡಿಸಿಎಂ ಹೇಳಿಕೆ ಸಮರ್ಥಿಸಿ ಮಾತನಾಡಿದ್ದಾರೆ.
ಡಿಕೆ ಶಿವಕುಮಾರ್ ಅವರು ಈ ನಾಡಿನ ಡೆಪ್ಯೂಟಿ ಸಿಎಂ ಆಗಿದ್ದಾರೆ. ಅವರಿಗೂ ಜವಾಬ್ದಾರಿತನ ಇದೆ. ಅಷ್ಟೆಲ್ಲ ಹಣ ಬಿಡುಗಡೆ ಮಾಡಿ ಫಿಲ್ಮ್ಂ ಫೆಸ್ಟಿವಲ್ ಮಾಡುವಾಗ ಚಿತ್ರರಂಗದವರು ಬರಬೇಕು. ಬ್ಯುಸಿ ಇರುವವರ ಬಗ್ಗೆ ಹೇಳಲ್ಲ. ಬ್ಯುಸಿ ಇಲ್ಲದೇ ಇರುವವರು ಬರಬೇಕು ಎಂದು ಡಿಕೆಶಿ ಪರ ನಟಿ ಹೇಮಾ ಚೌಧರಿ ಬ್ಯಾಟ್ ಬೀಸಿದ್ದಾರೆ.
ನಟರಿಗೆ ನಟ್ಟು ಬೋಲ್ಟು ಟೈಟ್ ಮಾಡುವುದು ಗೊತ್ತಿದೆ ಅಂತ ಅವರು ಬೇಕು ಅಂತಾ ಹೇಳಿಲ್ಲ. ಮಾತಿನ ಭರದಲ್ಲಿ ಆಗಿದೆ. ನಾವು ಮಾತಾಡುವಾಗ ಕೈಕಾಲು ಮುರಿತಿನಿ ಅಂತ ಹೇಳುತ್ತೇವೆ. ಹಾಗಂತ ಕೈ ಕಾಲು ಮುರಿದೇ ಹಾಕ್ತಿವಾ? ಎಂದು ನಟಿ ಪ್ರಶ್ನಿಸಿದ್ದಾರೆ. ಮಾತಿನ ಭರದಲ್ಲಿ ಡಿಕೆಶಿ ಅವರು ಹೇಳಿದ್ದಾರೆ. ಆದರೆ ಅವರ ಮಾತಿನಲ್ಲಿ ಅರ್ಥವಿದೆ ಎಂದು ಹೇಮಾ ಚೌಧರಿ ಹೇಳಿದ್ದಾರೆ.