ಹುಬ್ಬಳ್ಳಿ: ಯಾರಾದರೂ ಹೇಳಲಿ ಸಿ.ಎಂ.ಇಬ್ರಾಹಿಂ ಒಂದು ರೂಪಾಯಿ ತಿಂದಿದ್ದಾರೆ ಎಂದು. ಬಿಜೆಪಿಯವರೇ‌ ನಿಮಗೆ ಯಾಕಪ್ಪ ಸಾಬರ ದಾನ ಕೊಡುವ ಚಿಂತೆ ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಂ ಲೇವಡಿ ಮಾಡಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾರಾದರೂ ಒಬ್ಬರು ಹೇಳಲಿ ಒಂದು ರೂಪಾಯಿ ತಿಂದಿದ್ದೇವೆ ಎಂದು. ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸವಿಲ್ಲ ಹೀಗಾಗಿ ಸಾಬರು ಕೊಡುವ ದೇಣಿಗೆ,‌ ದಾನದ ಬಗ್ಗೆ ರೂಲ್ಸ್ ಮಾಡ್ತಾರೆ ಎಂದರು.

ನನ್ನ ಹಣ, ನನ್ನ ಆಸ್ತಿ ನಾನು ಯಾವುದೇ ದೇವಸ್ಥಾನ ಎಲ್ಲಿಗೆ ಬೇಕಾದರೂ ಕೊಡಬಹುದು ಅದಕ್ಕೆ ಅಧಿಕಾರ ಚಲಾಯಿಸುವ ಹಕ್ಕು ಸರ್ಕಾರಕ್ಕೂ ಇಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ನಿರುದ್ಯೋಗ ನಿವಾರಣೆ, ಭಯಮುಕ್ತ ಪ್ರಜಾಪ್ರಭುತ್ವ ಮಾಡಿದರೇ ಮಾತ್ರವೇ ದೇಶ ಉದ್ದಾರ ಆಗಲು ಸಾಧ್ಯ ಎಂದು ಅವರು ಹೇಳಿದರು.

ಸಿಎಂ ಸಿದ್ಧರಾಮಯ್ಯನವರ ಬಗ್ಗೆ ಮಾತನಾಡಿದ ಅವರು, ಟಗರು ಮೇಲೆ ಪ್ರೀತಿ ಅಂತ ಅಲ್ಲ. ಸಿದ್ಧರಾಮಯ್ಯ ಒಳ್ಳೆಯ ಮನುಷ್ಯ. ಭ್ರಷ್ಟಾಚಾರ ಮಾಡಿದವನಲ್ಲ. ದುಡ್ಡು ಮಾಡಬೇಕಿದ್ದರೇ ಈ ಹಿಂದೆ ಅಧಿಕಾರದ ಅವಧಿಯಲ್ಲಿಯೇ ಸಾಕಷ್ಟು ಮಾಡ್ತಿದ್ದರು. ಆದರೆ ಅಂತಹ ಕಾರ್ಯಕ್ಕೆ ಕೈ ಹಾಕಿಲ್ಲ. ಆದರೆ ಅವರ ಒಳ್ಳೆಯತನವನ್ನು ಹೊಗಳು ಭಟ್ಟರು ಹಾಳು ಮಾಡಿದ್ದಾರೆ ಎಂದು ಸಿ.ಎಂ.ಇಬ್ರಾಹಿಂ ಹೇಳಿದರು.

Leave a Reply

Your email address will not be published. Required fields are marked *