ಬೆಳಗಿನ ಜಾವ ಬಿಡುವಿಲ್ಲದೇ ಸುರಿದ ಭಾರೀ ಮಳೆಯಿಂದಾಗಿ ಮಲ್ಲೇಶ್ವರಂ ನ ಕ್ಲೌಡ್ ನೈನ್ ಆಸ್ಪತ್ರೆಯ ಬಳಿ ಬೃಹತ್ತಾಕಾರದ ಮರಗಳು ಎರಡು ಭಾಗವಾಗಿ ಸೀಳುಗೊಂಡು ಮುರಿದು ರಸ್ತೆಗುರುಳಿದೆ ಇದರಿಂದಾಗಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದ್ದು, ಧರೆಗುರುಳಿರುವ ಮರಗಳನ್ನು ತೆರವುಗೊಳಿಸುವವರೆಗೂ ಆ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.