ನವದೆಹಲಿ : ಪರ-ವಿರೋಧದ ಚರ್ಚೆಗೆ ಗ್ರಾಸವಾಗಿರುವ ತ್ರಿಭಾಷಾ ಸೂತ್ರಕ್ಕೆ ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಒಬ್ಬರು ಬಹು ಭಾಷೆಗಳನ್ನು ಕಲಿಯಬಹುದು. ನನಗೂ 7ರಿಂದ 8 ಭಾಷೆಗಳು ಗೊತ್ತು. ಆದ್ದರಿಂದ ನಾನು ಕಲಿಯುವುದನ್ನು ಆನಂದಿಸುತ್ತೇನೆ. ಇದರಿಂದ ವಿದ್ಯಾರ್ಥಿಗಳು ಕೂಡ ಸಾಕಷ್ಟು ಕಲಿಯಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂಸತ್ತಿನಲ್ಲಿ NEP ಕುರಿತು ತಮ್ಮ ನಿಲುವನ್ನು ಸಮರ್ಥಿಸಿಕೊಂಡ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, DMK ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಸುಧಾಮೂರ್ತಿ ಅವರೊಂದಿಗಿನ ತಮ್ಮ ಸಂಭಾಷಣೆಯನ್ನು ಸಹ ಅವರು ಉಲ್ಲೇಖಿಸಿದ್ದಾರೆ. ಯಾರೂ ಯಾರ ಮೇಲೂ ಏನನ್ನೂ ಹೇರುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾನು ಸುಧಾಮೂರ್ತಿ ಅವರನ್ನು ನಿಮಗೆ ಎಷ್ಟು ಭಾಷೆಗಳು ಗೊತ್ತು ಎಂದು ಕೇಳಿದೆ. ಅದಕ್ಕೆ ಅವರು ಹುಟ್ಟಿನಿಂದ ಕನ್ನಡತಿ, ವೃತ್ತಿಯಿಂದ ಇಂಗ್ಲಿಷ್ ಕಲಿತಿದ್ದೇನೆ. ಅಭ್ಯಾಸದಿಂದ ಸಂಸ್ಕೃತ, ಹಿಂದಿ, ಒಡಿಯಾ, ತೆಲುಗು ಮತ್ತು ಮರಾಠಿ ಭಾಷೆಗಳನ್ನು ಕಲಿತಿದ್ದೇನೆ ಎಂದಿದ್ದರು.

ಅದರಲ್ಲಿ ತಪ್ಪೇನು? ಸುಧಾಮೂರ್ತಿ ಅವರ ಮೇಲೆ ಈ ಭಾಷೆಗಳನ್ನು ಕಲಿಯುವಂತೆ ಯಾರು ಹೇರುತ್ತಿದ್ದಾರೆ? ಯಾರೂ ಯಾರ ಮೇಲೂ ಏನನ್ನೂ ಹೇರುತ್ತಿಲ್ಲ. ಇದು ಪ್ರಜಾಪ್ರಭುತ್ವ ಸಮಾಜ ಮತ್ತು ಕೆಲವೊಮ್ಮೆ ನೀವು ಬಹುಭಾಷಿಕರಾಗಿರಬೇಕು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *