ಬೆಂಗಳೂರು : ವಿಜಯೇಂದ್ರ ಚಡ್ಡಿ ಹಾಕೋ ಮುನ್ನ ನಾನು ಸಂಘಟನೆ ಮಾಡಿದ್ದೇನೆ. ವಿಜಯೇಂದ್ರ ಬಚ್ಚಾ, ನಾವು ಅವನಿಂದ ಕಲಿಯಬೇಕಿಲ್ಲ ಎಂದು ಮತ್ತೊಮ್ಮೆ ವಿಜಯೇಂದ್ರ ವಿರುದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಜಿಲ್ಲಾ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಎದ್ದಿರುವ ಗೊಂದಲಗಳ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ವಿಜಯೇಂದ್ರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ವಿಜಯೇಂದ್ರ ಅವರ ಒರಿಜಿನಲ್ ಬಣ್ಣ ಹೊರಗೆ ಬಂದಿದೆ. ವಿಜಯೇಂದ್ರ ಯಾಕೆ ಸರ್ಕಸ್ ಮಾಡ್ತಿದ್ದೀರಾ ಚುನಾವಣೆ ಅಂತ. ರಾಧಾಮೋಹನ್‌ಗೆ ಹೇಳಿ ರಾಜ್ಯಾಧ್ಯಕ್ಷ ನೀವೇ ಅಂತ ಕೈ ಎತ್ತಿಸಿಕೊಳ್ಳಿ. ಸಂಸದ ಸುಧಾಕರ್ ಮಾತ್ರವಲ್ಲ. ರಾಜ್ಯದ ಹಿರಿಯ ನಾಯಕರಿಗೆ ಜಿಲ್ಲಾ ಅಧ್ಯಕ್ಷ ಆಯ್ಕೆ ಬಗ್ಗೆ ಅಸಮಾಧಾನ ಇದೆ. ಇದೇನು ಪ್ರೈವೇಟ್ ಕಂಪನಿನಾ. ಎಲ್ಲ ನೀವೇ ಮಾಡಿಕೊಳ್ಳೋದಾದ್ರೆ ಮಾಡಿಕೊಳ್ಳಿ. ಅಣ್ಣ ಕೇಂದ್ರ ಮಂತ್ರಿಯಾಗಲಿ, ನಿಮ್ಮ ಅಪ್ಪ ರಾಷ್ಟ್ರಪತಿ ಆಗಲಿ ಅಂತ ಕಿಡಿಕಾರಿದರು.
ಹೈಕಮಾಂಡ್ ನಾಯಕರೇ ಅಧ್ಯಕ್ಷ ಘೋಷಣೆ ಮಾಡಲಿ. ಚುನಾವಣೆ ಯಾಕೆ ಬೇಕು? ವಿಜಯೇಂದ್ರ ಚಡ್ಡ ಹಾಕೋ ಮುನ್ನ ಸಂಘಟನೆ ಮಾಡಿದ್ದೇವೆ. ಈ ಬಚ್ಚಾನಿಂದ ನಾವು ಕಲಿಯಬೇಕಿಲ್ಲ. ನಮಗೆ ಯಾವುದೇ ಭಯ ಇಲ್ಲ. ಪಕ್ಷದಿಂದ ತೆಗೆದು ಹಾಕ್ತೀರಾ ಹಾಕಲಿ. ನಾವು ಹೆದರೊಲ್ಲ ಎಂದು ಸವಾಲು ಹಾಕಿದರು.
ನಿನ್ನೆ ಮಾಡಿರೋ ಜಿಲ್ಲಾಧ್ಯಕ್ಷರ ಪಟ್ಟಿಯಲ್ಲಿ ಯಡಿಯೂರಪ್ಪ-ರಾಘವೇಂದ್ರ ಬಿಟ್ಟು ಇನ್ಯಾರಿಗೂ ಅಧ್ಯಕ್ಷರ ಸ್ಥಾನ ಪಟ್ಟಿ ಇಷ್ಟ ಆಗಿಲ್ಲ. ಹೀಗೆ ಆದರೆ ಪಕ್ಷ ಕಟ್ಟಲು ಸಾಧ್ಯವಿಲ್ಲ. ಮಾಜಿ ಕೆಜೆಪಿ ಒಳಗೆ ಇರೋರಿಗೆ, ಹೊಗಳು ಭಟ್ಟರಿಗೆ, ಅಡ್ಜೆಸ್ಟೆಮೆಂಟ್ ಮಾಡೋರಿಗೆ ಸ್ಥಾನಮಾನ ಕೊಡುತ್ತಿದ್ದಾರೆ. ಉಸ್ತುವಾರಿ ರಾಧಾಮೋಹನ್ ದಾಸ್ ಕೂಡಾ ಪಕ್ಷಪಾತವಾಗಿದ್ದಾರೆ. ಹುಲಿ ಅಂತ ತಂದು ಕೂರಿಸಿದ್ರೆ ಅದು ಹುಲಿ ಆಗೊಲ್ಲ ಎಂದು ವಿಜಯೇಂದ್ರ ವಿರುದ್ಧ ಕಿಡಿಕಾರಿದರು.
ನಾಳೆ ಸಭೆ ಮಾಡುತ್ತಿದ್ದೇವೆ. ಈ ಸಭೆ ಎರಡು ಹಂತದಲ್ಲಿ ಆಗುತ್ತದೆ. ತಟಸ್ಥ ಪರಿವರ್ತನೆ ಆಗಿ ನಿಷ್ಠಾವಂತ ಆಗಿದೆ. ನಾಳೆ ಕೂತು ಚರ್ಚೆ ಮಾಡುತ್ತೀವಿ. ಈ ಅಧ್ಯಕ್ಷರನ್ನು ಒಪ್ಪೋಕೆ ಸಾಧ್ಯವಿಲ್ಲ ಎಂದು ವಿಜಯೇಂದ್ರ ಬದಲಾವಣೆಗೆ ಒತ್ತಾಯ ಮಾಡಿದರು.
ನಮ್ಮಲ್ಲಿ ಯಾರು ಅಭ್ಯರ್ಥಿ ಅನ್ನೋದು ಫೈನಲ್ ಮಾಡಿಲ್ಲ. ರಾಮುಲು ಸೇರಿ ಎಲ್ಲವೂ ಅಸಮಾಧಾನ ಇದ್ದಾರೆ. ಅವರ ಹಿಂದೆ ಇರೋ ಚೇಲಾಗಳು ಜಾಸ್ತಿ ಆಗಿದ್ದಾರೆ. ಬಹಳ ದಿನ ಅನ್ಯಾಯ, ಸರ್ವಾಧಿಕಾರಿ ಇರೋ ಮನೋಭಾವನೆ ಇರೋ ನಾಯಕನ ಅಂತ್ಯ ಆಗುತ್ತದೆ. ಯಡಿಯೂರಪ್ಪ ಒಬ್ಬನೇ ಲಿಂಗಾಯತ ನಾಯಕ ಅಂತ ಹೈಕಮಾಂಡ್ ತಿಳಿದುಕೊಂಡಿದೆ. ಹೀಗಾಗಿ ಇನ್ನು ಏನು ನಿರ್ಧಾರ ಮಾಡಿಲ್ಲ ಅಂತ ಹೈಕಮಾಂಡ್ ವಿರುದ್ಧವೂ ಬೇಸರ ವ್ಯಕ್ತಪಡಿಸಿದರು.