ಮಹಾರಾಷ್ಟ್ರದ ಎನ್ ಸಿಪಿ ಶಾಸಕ ಪ್ರಕಾಶ್ ಸೋಲಂಕಿ ಅವರ ನಿವಾಸಕ್ಕೆ ಮರಠಾ ಮೀಸಲು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಧ್ವಂಸಗೊಳಿಸಿದ ಘಟನೆ ಬೀಡ್ ಜಿಲ್ಲೆಯಲ್ಲಿ ನಡೆದಿದೆ.
ಮೀಸಲು ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಮುಖಂಡ ಮನೋಜ್ ಜಾರಂಗಿ ಪಾಟೀಲ್ ವಿರುದ್ಧ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸೋಲಂಕಿ ಮನೆ ಮುಂದೆ ಮುತ್ತಿಗೆ ಹಾಕಿದ ಪ್ರತಿಭಟನಕಾರರರು ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ನಂತರ ಬೆಂಕಿ ಹಚ್ಚಿದ್ದಾರೆ.
ದಾಳಿ ನಡೆದಾಗ ನಾನು ಮನೆಯಲ್ಲೇ ಇದ್ದೆ. ಅದೃಷ್ಟವಶಾತ್ ಮನೆಯಲ್ಲಿರುವ ಕುಟುಂಬದ ಸದಸ್ಯರು ಹಾಗೂ ಸಿಬ್ಬಂದಿ ಯಾವುದೇ ಅಪಾಯ ಇಲ್ಲದೇ ಪಾರಾಗಿದ್ದಾರೆ ಎಂದು ಸೋಲಂಕಿ ಹೇಳಿಕೆ ನೀಡಿದ್ದಾರೆ.