ಬೆಂಗಳೂರು : ಭಾರತವು ಕ್ರಾಂತಿಕಾರಿ ಬದಲಾವಣೆಯ ಹಂತದಲ್ಲಿ ಸಾಗುತ್ತಿದ್ದು, ದೇಶದ ಯುದ್ಧ ವಿಮಾನಗಳು, ಕ್ಷಿಪಣಿ ವ್ಯವಸ್ಥೆಗಳು, ನೌಕಾ ಪಡೆಯ ನೌಕೆಗಳು ನಮ್ಮ ಗಡಿಯನ್ನು ರಕ್ಷಿಸುವುದಲ್ಲದೆ, ಇಡೀ ವಿಶ್ವದ ಆಕರ್ಷಣೆಯ ಕೇಂದ್ರವಾಗುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.
ಏರೋ ಇಂಡಿಯಾ 2025ರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ರಕ್ಷಣಾ ಸಚಿವರು, ದೇಶದ ಸಶಸ್ತ್ರ ಪಡೆಗಳು ದೇಶಿಯವಾಗಿ ತಯಾರಿಸಿದ ರಕ್ಷಣಾ ಉತ್ಪನ್ನಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ. “ಏರೋ ಇಂಡಿಯಾ ಹೊಲಿಸಲಾಗದಂತಹ ಆದರೆ ಐತಿಹಾಸಿಕವಾದ ಅಪ್ರತಿಮವಾದ ಎತ್ತರವನ್ನು ತಲುಪಿದೆ. ಕಳೆದ ಮೂರು ದಿನಗಳಿಂದ ನಾನೇ ಖುದ್ದಾಗಿ ಹಾಜರಿದ್ದ, ಕಾರ್ಯಕ್ರಮದಲ್ಲಿನ ನನ್ನ ಅನುಭವವನ್ನು ಮೂರು ಪದಗಳಲ್ಲಿ ಹೇಳುವುದಾದರೆ ಅದು ಶಕ್ತಿ ಎಂದು ಹೇಳಿದರು.
“ಯಲಹಂಕದಲ್ಲಿ ನಾವು ಏನನ್ನು ನೋಡಬಹುದೋ ಅದು ಶಕ್ತಿಯ ದ್ಯೋತಕವಾಗಿದೆ. ಆ ಶಕ್ತಿ ಮತ್ತು ಉತ್ಸಾಹವನ್ನು ಭಾರತದಿಂದ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಭಾಗವಹಿಸುವವರಲ್ಲಿ ಕಾಣಬಹುದು. ನಮ್ಮ ಉದ್ಯಮಿಗಳು, ನಮ್ಮ ಸ್ಟಾರ್ಟ್ ಅಪ್‌ಗಳು ಮತ್ತು ನವೋದ್ಯಮಿಗಳಲ್ಲಿ ಕಂಡುಬರುವ ಉತ್ಸಾಹವು ಶ್ಲಾಘನೀಯವಾಗಿದೆ.
ದಶಕದ ಹಿಂದೆ ನಮ್ಮ ದೇಶಕ್ಕೆ ಶೇ. 65 ರಿಂದ 70 ರಷ್ಟು ರಕ್ಷಣಾ ಸಾಧನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದೇವು. ಆದರೆ ಇಂದು ದೇಶದಲ್ಲಿ ಅದೇ ಶೇಕಡಾವಾರು ರಕ್ಷಣಾ ಸಾಧನಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ಹೇಳಿದರು.