*ನಮ್ಮ ದೇಶದ ರಾಜಕಾರಣಿಗಳು, ತಮಗೆ ಇನ್ನೂರು ಮುನ್ನೂರು  ವರ್ಷ ಆಯಸ್ಸುಎಂದು, ಭಾವಿಸಿ ಸಣ್ಣ ಸಣ್ಣ  ಅವಕಾಶವನ್ನೂ ಬಿಡದೆ, ಕೇವಲ ಸಂಪತ್ತು ಹೆಚ್ಚಿಸಿಕೊಳ್ಳುವ ಕೆಲಸದಲ್ಲಿ  ಪ್ರಾಮಾಣಿಕತೆಯಿಂದ ಹಗಲು ರಾತ್ರಿ ಎನ್ನದೆ  ತೊಡಗಿರುತ್ತಾರೆ*. ಪಾಪಮುಪ್ಪಿನಲ್ಲಿ ನೆಮ್ಮದಿಯಾಗಿ, ಬಾಳಬೇಕಲ್ಲವಾ!

ನಗರ ಪಾಲಿಕೆ ಸದಸ್ಯನಾದ ಮೇಲೆ ಮೇಯರ್ ಗೆ ಲಾಬಿ, ಶಾಸಕರಾದ ಮೇಲೆ ಮಂತ್ರಿಗಿರಿಗೆ ಲಾಬಿ. ಮಂತ್ರಿಯಾದ ಮೇಲೆ ಪ್ರಭಾವಿ ಖಾತೆಗೆ ಲಾಬಿ, ಅಷ್ಟರೊಳಗೆ ಮಗನ ಮಗಳೊ ವಯಸ್ಸಿಗೆ ಬಂದಿರುತ್ತಾರೆ ಅವರನ್ನು ಶಾಸಕರನ್ನು  ಮಾಡುವುದಕ್ಕೆ ಲಾಬಿ. ಮತ್ತು ತಮ್ಮ ಸಂಬಂಧಿಕರಿಗೆ, ಸರಕಾರಿ ಜಮೀನು, ಸರಕಾರದ ಆಯಕಟ್ಟಿನ ಸ್ಥಳದ ಜವಾಬ್ದಾರಿ ಹೀಗೆ ತಮ್ಮ ಅಧಿಕಾರ ಅವಧಿಯಲ್ಲಿ ಎಷ್ಟೆಷ್ಟು ಬೇಕೋ ಎಲ್ಲೆಲ್ಲಿ ಬೇಕೋ, ಎಲ್ಲವನ್ನು ಮಾಡಿಸಿಕೊಡುವ ಅಥವಾ ಮಾಡಿಕೊಳ್ಳುವ, ಬರದಲ್ಲಿಯೇ ನಿರತರಾಗಿರುತ್ತಾರೆ,

ಹೀಗೆ ಚುನಾಯಿತ ಪ್ರತಿನಿಧಿಗಳಿಗೆ ತೃಪ್ತಿಯೂ ಇಲ್ಲ ಬೇರೆಯವರನ್ನು ಬೆಳಸುವ ಆಸಕ್ತಿಯು ಇಲ್ಲ. ಇದು ಎಲ್ಲ ಪಕ್ಷಗಳಲ್ಲೂ ಸಹ ಇದ್ದುದ್ದೆ  ಪಕ್ಷಾತೀತವಾಗಿ ನಡೆಯುತ್ತಿದೆ,
“ಕಾರ್ಯಕರ್ತರು ಕೇವಲ ದುಡಿಮೆಗೆ ಮಾತ್ರ.” ಎಂಬುದೆ ಬಹುತೇಕ ನಾಯಕರ ಘೋಷವಾಕ್ಯ, ಇನ್ನೂ ಈ ದೇಶದಲ್ಲಿ ಬದುಕುವ ಸಾಮಾನ್ಯ ಪ್ರಜೆ, { ಬಡವರ} ಕಷ್ಟಕಾರ್ಪಣ್ಯಗಳನ್ನು ಕೇಳುವಂತಹ, ನಾಯಕರು ಇಲ್ಲದಂತಹ ಪರಿಸ್ಥಿತಿ ಉದ್ಭವವಾಗಿದೆ, ಎಲ್ಲೋ ಕೆಲವರು ಇದ್ದರೂ ಸಹ, ಅವರನ್ನು ಯಥೇಚ್ಛವಾಗಿ ತುಳಿಯುವ, ಅಥವಾ ಅವರ ರಾಜಕೀಯ ಭವಿಷ್ಯವನ್ನೇ ಹಾಳು ಮಾಡುವ, ಅವರಗಳದೇ ಪಕ್ಷದಲ್ಲಿ ಇರುವಂತಹ ನಾಯಕರು ಇದ್ದಾರೆ.

Leave a Reply

Your email address will not be published. Required fields are marked *