ಬೆಂಗಳೂರು : ಇನ್ವೆಸ್ಟ್ ಕರ್ನಾಟಕ 2025 ಕಾರ್ಯಕ್ರಮದಿಂದಾಗಿ ಬೆಂಗಳೂರಿನ ಅರಮನೆ ಮೈದಾನದ ಸುತ್ತಮುತ್ತ ಸಂಚಾರದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.

ವಾಹನಗಳನ್ನು ನಿಲುಗಡೆ ಮಾಡಲು ನಿರ್ದಿಷ್ಟ ಸ್ಥಳಗಳನ್ನು ನಿಗದಿಪಡಿಸಲಾಗಿದೆ ಮತ್ತು ಕೆಲವು ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಸಂಚಾರ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ಸಂಚಾರಿ ಪೊಲೀಸರು ಸೂಚಿಸಿದ್ದಾರೆ.

ಅರಮನೆ ಮೈದಾನದಲ್ಲಿ ಇಂದಿನಿಂದ (ಫೆ.11) ಶುಕ್ರವಾರ (ಫೆ.14) ರ ವರೆಗೆ ಬೆಳಿಗ್ಗೆ 08.00 ಗಂಟೆಯಿಂದ ಸಂಜೆ 06.00 ಗಂಟೆಯವರೆಗೆ ಇನ್ವೆಸ್ಟ್ ಕರ್ನಾಟಕ ಫೋರಂ ವತಿಯಿಂದ, ‘ಇನ್‌ವೆಸ್ಟ್ ಕರ್ನಾಟಕ-2025’ (Invest Karnataka 2025) ಗ್ಲೋಬಲ್ ಇನ್‌ವೆಸ್ಟರ್ಸ ಮೀಟ್ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು, ಸಚಿವರುಗಳು, ಉದ್ದಿಮೆದಾರರು, ವಿದೇಶಿ ಗಣ್ಯರುಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸ್ಥಳ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಸುಗಮ ಸಂಚಾರದ ಹಿತದೃಷ್ಟಿಯಿಂದ, ಬೆಂಗಳೂರು ಸಂಚಾರಿ ಪೊಲೀಸರು ವಾಹನ ಸಂಚಾರ ಬದಲಾವಣೆ ಮಾಡಿದ್ದಾರೆ.

ಪ್ಯಾಲೇಸ್ ರಸ್ತೆ, ಸರ್.ಸಿ.ವಿ.ರಾಮನ್ ರಸ್ತೆ, ನಂದಿದುರ್ಗ ರಸ್ತೆ, ಎಂ.ವಿ.ಜಯರಾಮ ರಸ್ತೆ, ಬಳ್ಳಾರಿ ರಸ್ತೆ, ತರಳಬಾಳು ರಸ್ತೆ, ಜಯಮಹಲ್ ರಸ್ತೆ, ರಮಣಮಹರ್ಷಿ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

Leave a Reply

Your email address will not be published. Required fields are marked *