ಕೋಲ್ಕತ್ತಾ : ಫಿಲ್‌ ಸಾಲ್ಟ್‌, ವಿರಾಟ್‌ ಕೊಹ್ಲಿ ಆಕರ್ಷಕ ಅರ್ಧಶತಕ ನೆರವಿನಿಂದ ಆರ್‌ಸಿಬಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಐಪಿಎಲ್‌ 2025ರಲ್ಲಿ ಆರ್‌ಸಿಬಿ ಶುಭಾರಂಭ ಪಡೆದಿದೆ. ತವರಲ್ಲೇ ಕೋಲ್ಕತ್ತಾ ನೈಟ್‌ ರೈಡರ್ಸ್‌ ಮುಖಭಂಗ ಅನುಭವಿಸಿದೆ.

ಟಾಸ್‌ ಗೆದ್ದ ಆರ್‌ಸಿಬಿ ನಾಯಕ ರಜತ್‌ ಪಾಟೀದಾರ್‌ ಫೀಲ್ಡಿಂಗ್‌ ಆಯ್ದುಕೊಂಡರು. ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ 8 ವಿಕೆಟ್‌ ನಷ್ಟಕ್ಕೆ 174 ರನ್‌ ಗಳಿಸಿತು. 175 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ 3 ವಿಕೆಟ್‌ ನಷ್ಟಕ್ಕೆ 16.2 ಓವರ್‌ಗಳಿಗೆ 177 ರನ್‌ ಗಳಿಸಿ ಗೆದ್ದು ಬೀಗಿತು.

ಮೊದಲು ಬ್ಯಾಟ್‌ ಮಾಡಿದ ಕೆಕೆಆರ್‌ ಮೊದಲ ಓವರ್‌ನಲ್ಲೇ ಕ್ವಿಂಟನ್‌ ಡಿಕಾಕ್‌ (4) ವಿಕೆಟ್‌ ಕಳೆದುಕೊಂಡು ಆಘಾತ ಎದುರಿಸಿತು. ಈ ವೇಳೆ ಜೊತೆಯಾದ ಸುನಿಲ್ ನರೈನ್ ಮತ್ತು ಅಜಿಂಕ್ಯಾ ರಹಾನೆ ಬಿರುಸಿನ ಆಟದ ಮೂಲಕ ಗಮನ ಸೆಳೆದರು. ಆರ್‌ಸಿಬಿ ಬೌಲರ್‌ಗಳ ಬೆವರಿಳಿಸಿದ ರಹಾನೆ ಕೇವಲ 25 ಬಾಲ್‌ಗಳಿಗೆ ಫಿಫ್ಟಿ ಬಾರಿಸಿ ಅಬ್ಬರಿಸಿದರು.

ಇತ್ತ ಅಜಿಂಕ್ಯಾ 31 ಎಸೆತಕ್ಕೆ 56 ರನ್‌ (6 ಫೋರ್‌, 4 ಸಿಕ್ಸರ್‌) ಗಳಿಸಿದ್ದರು. ಅತ್ತ ನರೈನ್‌ 26 ಬಾಲ್‌ಗೆ 44 ರನ್‌ (5 ಫೋರ್‌, 3 ಸಿಕ್ಸರ್) ಬಾರಿಸಿದ್ದರು. ರಹಾನೆ ಮತ್ತು ನರೈನ್‌ ಶತಕದ ಜೊತೆಯಾಟ ಆರ್‌ಸಿಬಿಗೆ ನುಂಗಲಾರದ ತುತ್ತಾಗಿತ್ತು.‌‌

ಈ ವೇಳೆ ರಶಿಕ್‌ ಸಲಾಮ್‌ ಬೌಲಿಂಗ್‌ನಲ್ಲಿ ನರೈನ್‌ ಕ್ಯಾಚ್‌ ನೀಡಿ ನಿರ್ಗಮಿಸಿದರು. ಸ್ಪಿನ್‌ ಜಾದು ಮಾಡಿದ ಕೃಣಾಲ್‌ ಪಾಂಡ್ಯ, ಕೆಕೆಆರ್‌ ಓಟಕ್ಕೆ ಬ್ರೇಕ್‌ ಹಾಕಿದರು. ಪ್ರಮುಖ ಬ್ಯಾಟರ್‌ಗಳಾದ ವೆಂಕಟೇಶ್‌ ಅಯ್ಯರ್‌ (6), ರಿಂಕು ಸಿಂಗ್‌ (12) ಇಬ್ಬರನ್ನೂ ಹೊರಹಾಕುವಲ್ಲಿ ಯಶಸ್ವಿಯಾದರು.

ಹೊಸ ನಾಯಕನಾಗಿ ಬಂದ ರಜತ್‌ ಪಾಟೀದಾರ್‌ ಕೂಡ ಜವಾಬ್ದಾರಿಯುತ (34 ರನ್‌, 16 ಬಾಲ್‌, 5 ಫೋರ್‌, 1 ಸಿಕ್ಸರ್‌) ಆಟ ಆಡಿದರು. ದೇವದತ್‌ ಪಡಿಕಲ್‌ (10), ಲಿಯಾಮ್‌ ಲಿವಿಂಗ್‌ಸ್ಟೋನ್‌ 15 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Leave a Reply

Your email address will not be published. Required fields are marked *