ಇಸ್ರೇಲ್ ಮೇಲೆ ದಾಳಿ ನಡೆಸಿದ ಹಮಾಸ್ ಉಗ್ರರನ್ನು ಮುನ್ನಡೆಸಿದ್ದ ಕಮಾಂಡರ್ ಹತ್ಯೆ ಆಗಿದ್ದು, ಎರಡೂ ದೇಶಗಳ ನಡುವಣ ಯುದ್ಧದಲ್ಲಿ ಮೃತರ ಸಂಖ್ಯೆ 10,000ಕ್ಕೇರಿದೆ.
ಅಕ್ಟೋಬ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಗಡಿ ದಾಟಿ ದಾಳಿ ನಡೆಸಿದ್ದರು. ಮಂಗಳವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಮಾಸ್ ಉಗ್ರರ ಕಮಾಂಡರ್ ಹತ್ಯೆಯಾಗಿದ್ದಾನೆ.
ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಇದುವರೆಗೆ 8306 ಮಂದಿ ಮೃತಪಟ್ಟಿದ್ದು, ಗಾಜಾ ನಡೆಸಿದ ದಾಳಿಯಲ್ಲಿ 3457 ಇಸ್ರೇಲ್ ನಾಗರಿಕರು ಸಾವಿಗೀಡಾಗಿದ್ದಾರೆ.
ಎರಡೂ ದೇಶಗಳ ನಡುವಿನ ಯುದ್ಧದಲ್ಲಿ ಮೃತಪಟ್ಟವರ ಪೈಕಿ ಅರ್ಧದಷ್ಟು ಮಕ್ಕಳು ಮೃತಪಟ್ಟಿದ್ದರೆ, 944ಕ್ಕೂ ಹೆಚ್ಚು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಅವರು ಹೇಳಿದರು.