ಶ್ರೀಹರಿಕೋಟಾ : 1963ರ ನ.21ರಂದು ಅಮೆರಿಕಾದ ರಾಕೆಟ್ ಬಳಸಿ ಮೊದಲ ಬಾರಿಗೆ ಉಪಗ್ರಹ ಮಾಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ನೆನ್ನೆ ತನ್ನ 100ನೇ ಉಡ್ಡಯನವನ್ನು ಯಶಸ್ವಿಯಾಗಿ ನಡೆದಿದೆ.

ಇಂದು ಬೆಳಿಗ್ಗೆ 6.23ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಎನ್’ವಿಎಸ್-02 ಉಪಗ್ರಹ ಹೊತ್ತ ಜಿಎಸ್ಎಲ್’ವಿ ಬೆಂಕಿ ಉಗುಳುತ್ತಾ ನಭಕ್ಕೆ ಜಿಗಿಯಿತು. ಈ ಮೂಲಕ ಸ್ವದೇಶಿ ಜಿಪಿಎಸ್ ಯೋಜನೆಯ ಭಾಗವಾಗಿ ಎನ್’ವಿಎಸ್-02 ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ. 100ನೇ ಉಡ್ಡಯನದೊಂದಿಗೆ ಇತಿಹಾಸ ಸೃಷ್ಟಿಸಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಇಸ್ರೋ, “ಜಿಎಸ್‌ಎಲ್‌ವಿ- ಎಫ್15 ರಾಕೆಟ್‌ ಮೂಲಕ ಎನ್‌ವಿಎಸ್‌- 02 ಉಪಗ್ರಹ ಉಡ್ಡಯನ ಯೋಜನೆ ಯಶಸ್ವಿಯಾಗಿದೆ. ಬಾಹ್ಯಾಕಾಶ ನ್ಯಾವಿಗೇಷನ್‌ನಲ್ಲಿ ಭಾರತ ಹೊಸ ಎತ್ತರಕ್ಕೆ ತಲುಪಿದೆ ಎಂದು ಸಂತಸ ವ್ಯಕ್ತಪಡಿಸಿದೆ.

ರಾಕೆಟ್ ಉಡಾವಣೆ ಯಶಸ್ವಿ ಕುರಿತು ಮಾತನಾಡಿರುವ ನಾರಾಯಣ್ ಅವರು, ಈ ಸಾಧನೆಯು ಟೀಮ್‌ವರ್ಕ್’ನಿಂದ ಆಗಿದ್ದು, ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಈ ವರ್ಷ ಇಸ್ರೋಗೆ ಬಿಡುವಿಲ್ಲದ ವರ್ಷವಾಗಿದೆ. ಮುಂಬರುವ ತಿಂಗಳುಗಳಲ್ಲಿ ಹಲವಾರು ಮಿಷನ್‌ಗಳು ನಮ್ಮ ಮುಂದಿವೆ. ಗನ್‌ಯಾನ ಭಾಗವಾಗಿ G1 ಮಿಷನ್‌ನ ತಯಾರಿಕೆಯಲ್ಲಿ ಉತ್ತಮವಾಗಿ ಮುನ್ನಡೆಯುತ್ತಿದ್ದೇವೆ. ಇದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಈ ವರ್ಷ ಇನ್ನೂ ಕೆಲವು ಯೋಜನೆಗಳು ಇಸ್ರೋ ಮುಂದಿವೆ.

ಚಂದ್ರಯಾನ 4, ಚಂದ್ರಯಾನ 5 ಮಿಷನ್‌ಗಳ ಜೊತೆಗೆ ಶ್ರೀಹರಿಕೋಟಾದಲ್ಲಿ ಮೂರನೇ ಉಡಾವಣಾ ಪ್ಯಾಡ್ ಮತ್ತು ಕುಲಶೇಖರಪಟ್ಟಣಂನಲ್ಲಿ ಎರಡನೇ ಉಡಾವಣೆ ಸೇರಿದಂತೆ ಹಲವಾರು ಯೋಜನೆಗಳಿವೆ. ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಯನ್ನು ಹೊರತರುವಲ್ಲಿ ನನ್ನನ್ನು ಇಸ್ರೋ ಅಧ್ಯಕ್ಷನಾಗಿಸಿದ ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳುತ್ತೇನೆಂದು ಹೇಳಿದ್ದಾರೆ.

ಈ ಎನ್’ವಿಎಸ್ ಸ್ಯಾಟಲೈಟ್ ಭಾರತದ ನ್ಯಾವಿಗೇಷನ್ (ಸ್ವದೇಶಿ ಜಿಪಿಎಸ್) ಉಪಗ್ರಹಗಳ ಜಾಲದ 2ನೇ ತಲೆಮಾರಿನ ಉಪಗ್ರಹವಾಗಿದೆ. ಇದು ಭಾರತೀಯ ಉಪಖಂಡ (ಜೊತೆಗೆ ಅದರಾಚೆಗಿನ 1500 ಕಿ.ಮೀ.ದೂರದವರೆಗೆ)ದ ಬಳಕೆದಾರರಿಗೆ ನಿಖರ ಸಮಯ, ಸ್ಥಾನ ಮತ್ತು ವೇಗವನ್ನು ನೀಡುವ ಗುರಿಯನ್ನು ಹೊಂದಿದೆ.

ಈ ಉಪಗ್ರಹವು ಭೂಮಿ, ವಾಯು ಮತ್ತು ಸಾಗರ ಸಂಚಾರ, ಕೃಷಿ, ನೌಕೆಗಳ ನಿರ್ವಹಣೆ, ಮೊಬೈಲ್ ಲೊಕೇಷನ್ ಆಧರಿತ ಸೇವೆಗಳು, ಸ್ಯಾಟಲೈಟ್ ಗಳ ಕಕ್ಷೆಯ ನಿರ್ಧಾರ, ಇಂಟರ್ನೆಟ್ ಆಫ್ ಥಿಂಗ್ಸ್ ಆಧರಿತ ಅಪ್ಲಿಕೇಷನ್‌ಗಳು, ತುರ್ತು ಮತ್ತು ಸಮಯಾಧಾರಿತ ಸೇವಗಳಿಗೆ ನೆರವು ನೀಡಲಿದೆ.

Leave a Reply

Your email address will not be published. Required fields are marked *