ಬೆಂಗಳೂರು : ನಾನೇ ಸಿಎಂ ಎಂದು ಸ್ವಯಂ ಘೋಷಣೆ ಮಾಡಿಕೊಂಡರೆ ಸಾಲದು, ರಾಜ್ಯದಲ್ಲಿ ಸಿಎಂ ಸೀಟ್ ಖಾಲಿಯಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ್ ಡಿಕೆಶಿ ಗೆ ಟಾಂಗ್ ಕೊಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರತಿಯೊಬ್ಬರಿಗೂ ತಾವು ಸಿಎಂ ಆಗಬೇಕೆಂಬ ಆಸೆ ಇರುವುದು ಸಹಜ. ಜೊತೆಗೆ, ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ಈಗ 37 ಮಂದಿ ಲಿಂಗಾಯಿತ ಸಮುದಾಯದ ಶಾಸಕರಿದ್ದಾರೆ. ಈ ಪ್ರತ್ಯೇಕವಾಗಿ ಲಿಂಗಾಯಿತ ಶಾಸಕರ ಸಭೆಯನ್ನು ಮಾಡಲಾಗುವುದು.
ಪ್ರತಿಯೊಂದು ಸಮುದಾಯಕ್ಕೂ ಸಹ ಸಿಎಂ ಸೀಟ್ ಬಗ್ಗೆ ಆಕಾಂಕ್ಷೆ ಇರುತ್ತದೆ ಎಂದು ಪರೋಕ್ಷವಾಗಿ ತಮ್ಮ ಆಕಾಂಕ್ಷೆಯನ್ನೂ ಬಿಚ್ಚಿಟ್ಟಿದ್ದಾರೆ. ಶೀಘ್ರದಲ್ಲೇ ಲಿಂಗಾಯಿತ ಶಾಸಕರ ಸಭೆಯ ದಿನಾಂಕವನ್ನು ಘೋಷಿಸಲಾಗುವುದು ಎಂದು ಎಂಬಿ ಪಾಟೀಲ್ ಹೇಳಿದರು.