ಆಂಧ್ರಪ್ರದೇಶ : ದೇಶದ ಅತಿ ಹೆಚ್ಚು ಸಿರಿವಂತ ದೇವರುಗಳ ಸಾಲಿನಲ್ಲಿ ಬರುವುದು ತಿರುಪತಿ ತಿರುಮಲ ವೆಂಕಟೇಶ್ವರ ವರ್ಷಕ್ಕೆ ಏನಿಲ್ಲ ಎಂದರೂ ಸಾವಿರಾರು ಕೋಟಿ ರೂಪಾಯಿಗಳ ಆದಾಯ ಈ ದೇವಾಲಯಕ್ಕೆ ಇದೆ.
ಪ್ರತಿ ನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಹರಕೆಯ ರೂಪದಲ್ಲಿ ಚಿನ್ನ ಬೆಳ್ಳಿ ವಜ್ರ ವೈಢೂರ್ಯವನ್ನು ತಿಮ್ಮಪ್ಪನಿಗೆ ಸಲ್ಲಿಕೆ ಮಾಡುತ್ತಲೇ ಇರುತ್ತಾರೆ. ಹೀಗಿರುವಾಗಲೇ ತಿರುಪತಿ ತಿಮ್ಮಪ್ಪ ದೇವಾಲಯದ ಪುರೋಹಿತ ಎನಿಸಿಕೊಂಡ ವ್ಯಕ್ತಿಯೊಬ್ಬರ ಮನೆಯ ಮೇಲೆ ಐಟಿ ದಾಳಿ ನಡೆದಿದೆ.
ದೇಶದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದ ಇಲ್ಲಿರುವ 16 ಪುರೋಹಿತರಲ್ಲಿ ಒಬ್ಬ ಪುರೋಹಿತರ ಮನೆಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ಮಾಡಿದಾಗ ಸಿಕ್ಕಿರುವ ಹಣ 150 ಕೋಟಿ ರೂಪಾಯಿ, 128 ಕೆ.ಜಿ ಚಿನ್ನ ಹಾಗೂ 70 ಕೋಟಿ ರೂಪಾಯಿ ಬೆಲೆಯ ವಜ್ರ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇವರಿಗೆ ದಾನ ಮಾಡುವಾಗ ಈಗಲಾದರೂ ಸ್ವಲ್ಪ ಯೋಚಿಸಿ.. ಹಣ, ಚಿನ್ನ, ವಜ್ರ ದೇವರಿಗೆ ಬೇಕೇ? ಒಬ್ಬರ ಹತ್ತಿರ ಇಷ್ಟು ಸಿಕ್ಕಿದೆ ಅಂದಮೇಲೆ, ಇನ್ನು ಉಳಿದ 15 ಪುರೋಹಿತರ ಮನೆಯಲ್ಲಿ ಎಷ್ಟು ಇರಬಹುದು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾ ತುಂಬಾ ವೈರಲ್ ಆಗಿದೆ.