ನಿರ್ಮಾಪಕ ದಿಲ್ ರಾಜು ಅವರು ಸೋಲಿನ ಸುಳಿಯಲ್ಲಿ ಇದ್ದಾರೆ. 450 ಕೋಟಿ ರೂಪಾಯಿ ಬಜೆಟ್​ನಲ್ಲಿ ನಿರ್ಮಾಣ ಮಾಡಿದ ರಾಮ ‘ಗೇಮ್ ಚೇಂಜರ್’ ಸಿನಿಮಾ ನಷ್ಟ ಅನುಭವಿಸುತ್ತಿರುವಾಗಲೇ ತೆರಿಗೆ ಇಲಾಖೆ ತಂಡದವರು ದಿಲ್ ರಾಜು ಮನೆ, ಕಚೇರಿ ಹಾಗೂ ಅವರ ಕುಟುಂಬದ ಮೇಲೆ ದಾಳಿ ನಡೆಸಿದೆ. ಈ ದಾಳಿ ವೇಳೆ ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ‘ಪುಷ್ಪ 2’ ನಿರ್ಮಾಪಕರ ಮನೆಯ ಮೇಲೂ ಐಟಿ ದಾಳಿ ಆಗಿದೆ ಎಂದು ತಿಳಿದು ಬಂದಿದೆ.

ಐಟಿ ಇಲಾಖೆಯವರು ಬರೋಬ್ಬರಿ 65 ತಂಡಗಳಲ್ಲಿ ಬಂದಿದ್ದು, ದಿಲ್ ರಾಜುಗೆ ಸಂಬಂಧಿಸಿದ 8 ಕಡೆಗಳಲ್ಲಿ ಏಕ ಕಾಲಕ್ಕೆ ದಾಳಿ ನಡೆಸಿದ್ದಾರೆ. ಇದರಲ್ಲಿ ದಿಲ್ ರಾಜು ಅವರ ಮನೆ, ಕಚೇರಿ, ಅವರ ಸಹೋದರ ಸಿರೇಶ್ ಮಗಳು ಹನ್ಸಿತಾ ರೆಡ್ಡಿ ಮನೆಗಳು ಕೂಡ ಇವೆ. ‘ಸಂಕ್ರಾಂತಿಗೆ ವಸ್ತುನ್ನಾಮ್’​ ಚಿತ್ರದ ನಿರ್ದೇಶಕ ಅನಿಲ್ ರಾವಿಪುಡಿ ಕಚೇರಿ ಮೇಲೂ ಐಟಿ ಇಲಾಖೆ ಪರಿಶೀಲನೆ ನಡೆಸಿದೆ. ಈ ದಾಳಿ ಹಿಂದಿನ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಎರಡೂ ಸಂಸ್ಥೆಗಳು ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡುವುದರಲ್ಲಿ ಎತ್ತಿದ ಕೈಯಾಗಿದ್ದು, ಈ ಸಂದರ್ಭದಲ್ಲಿ ಎಲ್ಲಾದರೂ ಅಕ್ರಮ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಸಂಕ್ರಾಂತಿ ವೇಳೆ ದಿಲ್ ರಾಜು ನಿರ್ಮಾಣದ ‘ಗೇಮ್ ಚೇಂಜರ್’ ಹಾಗೂ ‘ಸಂಕ್ರಾಂತಿಕಿ ವಸ್ತುನ್ನಾಮ್’ ಚಿತ್ರಗಳು ರಿಲೀಸ್ ಆಗಿವೆ. ‘ಪುಷ್ಪ 2’ ಚಿತ್ರ ನಿರ್ಮಾಣ ಸಂಸ್ಥೆ ಮೇಲೂ ಐಟಿ ಅಧಿಕಾರಿಗಳ ದಾಳಿ ಮಾಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್​ ನವೀನ್​, ಸಿಇಒ ಚರ್ರಿ ಕಚೇರಿ ಹಾಗೂ ಆಪ್ತರ ಕಚೇರಿಗಳಲ್ಲೂ ಐಟಿ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ಆಗಿದೆ. ವೆಂಕಟೇಶ್ವರ ಪ್ರೊಡಕ್ಷನ್ ಸಂಸ್ಥೆಯಲ್ಲೂ ಐಟಿ ತಂಡದವರು ದಾಖಲೆ ಪರಿಶೀಲನೆ ಮಾಡಿದ್ದಾರೆ ಎಂದು ಹೇಳಲಾಗಿದೆ

Leave a Reply

Your email address will not be published. Required fields are marked *